ಕೆಲಸ ಮಾಡದ ಸಿಬ್ಬಂದಿ: ಶಾಸಕ ಆಕ್ರೋಶ
ಹಿರೀಸಾವೆ: ಗ್ರಾಮ ಪಂಚಾಯಿತಿಯಲ್ಲಿ ಎಲ್ಲ ತಾಂತ್ರಿಕ ಸೌಲಭ್ಯಗಳಿದ್ದರು, ಸರಿಯಾಗಿ ಕೆಲಸ ಮಾಡದ ಕಂಪ್ಯೂಟರ್ ಆಪರೇಟರ್ ಬದಲಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಸೋಮವಾರ ಕಬ್ಬಳಿಯಲ್ಲಿ ಹೇಳಿದರು.
ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ `ಗ್ರಾಮಸಭೆ'ಯಲ್ಲಿ ಅವರು ಮಾತನಾಡಿ, ಪಡಿತರ ಚೀಟಿ ನೋಂದಾವಣಿ ಮಾಡಲು ತಾಂತ್ರಿಕ ನೆಪ ಹೇಳಿ, ಖಾಸಗಿ ಸೈಬರ್ ಸೇಂಟರ್ಗಳಿಗೆ ಸಾರ್ವಜನಿಕರನ್ನು ಕಳುಹಿಸಲಾ ಗುತ್ತಿದ್ದೆ, ಖಾಸಗಿ ನೆಟ್ ಕೇಂದ್ರಗಳಲ್ಲಿ ಪಡಿತರ ಚೀಟಿ ನೋಂದಾಯಿಣಿಗೆ ಹೆಚ್ಚುವರಿ ಹಣ ವಸುಲು ಮಾಡುತ್ತಿ ರುವ ಬಗ್ಗೆ ದೂರುಗಳ ಬರುತ್ತಿವೆ ಎಂದರು.
ಹೆಚ್ಚುವರಿ ಹಣ ಪಡೆಯುತ್ತಿರುವ ಕೇಂದ್ರ ಬದಲಿಸಲು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನ ಎಲ್ಲ ಅಧಿಕಾರಿಗಳು ಸೋಮವಾರ ಮತ್ತು ಶನಿವಾರ ತಮ್ಮ ಕಛೇರಿಯಲ್ಲಿ ಇದ್ದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವಂತೆ ಸೂಚನೆ ನೀಡಿರುವುದಾಗಿ ಆವರು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಿ.ಜಿ. ಅಂಬಿಕಾರಾಮಕೃಷ್ಣ ಮಾತನಾಡಿ, ಡೆಂಗ್ಯೂ ಜ್ವರ ಜಿಲ್ಲೆಯಲ್ಲಿ ಹೆಚ್ಚುತ್ತಿದೆ, ಪ್ರತಿ ಗ್ರಾಮದಲ್ಲಿಯೂ ಸ್ವಚ್ಛತೆ ಕಾಪಾಡ ಬೇಕು, ಅಧಿಕಾರಿ ಗಳೊಂದಿಗೆ ಸಾರ್ವಜನಿಕರು ಸಹಕರಿ ಸಿದರೆ ಮಾತ್ರ ಡೆಂಗ್ಯೂ ಜ್ವರ ಹರಡ ದಂತೆ ತಡೆಯಲು ಸಾಧ್ಯ ಎಂದರು.
ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ನಿಂಗರಾಜಪ್ಪ, ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಕೃಷ್ಣನಾಯಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹೇಗೌಡ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಜನ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ವಿವಿಧ ವೇತನಗಳ ಮಂಜೂರಾತಿ ಪತ್ರ ಶಾಸಕರು ವಿತರಿಸಿದರು.
ಕಬ್ಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಶಾಸಕರು ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.