ಗುರುವಾರ , ಜೂನ್ 24, 2021
23 °C

ಕೆಲಸ ಮಾಡದ ಸೇವಾ ಕೌಂಟರ್: ಗ್ರಾಹಕರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: `ತಾಲ್ಲೂಕಿನ ಪಂಚಾಯಿತಿ ಮಟ್ಟದಲ್ಲಿ ವಿದ್ಯುತ್ ಗ್ರಾಹಕರ ಸಮಸ್ಯೆ ಹಾಗೂ ಸೇವೆಗಾಗಿ 24 ಗಂಟೆಯೂ ಕೆಲಸ ಮಾಡುವ ವಿಶೇಷ ಕೌಂಟರ್‌ಗಳು ಕಾರ್ಯರೂಪಕ್ಕೆ ಬರದಿದ್ದರೂ ಅವು ಗಳನ್ನು ದಾಖಲೆಯಲ್ಲಿ ಮಾತ್ರ ತೋರಿಸಿ  ಹಣ ಖರ್ಚು ಹಾಕಲಾಗುತ್ತಿದೆ~ ಎಂದು ಎ.ಪಿ.ಎಂ.ಸಿ. ಸದಸ್ಯ ಅರವಿಂದ ಪೈ ಆರೋಪಿಸಿದರು.ಶುಕ್ರವರ ಇ್ಲ್ಲಲಿ ನಡೆದ ವಿದ್ಯುತ್ ಗ್ರಾಹಕರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,   `ಮಳೆಗಾಲದಲ್ಲಿ ಬಿರುಗಾಳಿಗೆ ಉರುಳಿ ಬಿದ್ದ ಕಂಬಗಳನ್ನು  ಬದಲಾಯಿಸುವಾಗ ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗದುಕೊಳ್ಳಬೇಕು. ಇಲ್ಲದಿದ್ದರೆ ಅಂತಹ  ಕಾಮಗಾರಿಗೆ ಯಾವ ಆಧಾರವೂ ಇರುವುದಿಲ್ಲ. ಆದರೆ ಇಲಾಖೆಯ ದಾಖಲೆಯಲ್ಲಿ ಮಾತ್ರ   ಕಾಮಗಾರಿ ಗಳಿಗೆ ಲಕ್ಷಾಂತರ ರೂ. ಹಣ ಮಾತ್ರ ಖರ್ಚು ಬಿದ್ದಿರುತ್ತದೆ.

 

ತಾಲ್ಲೂಕಿನ ಹಂದಿಗೀಣ ಗ್ರಾಮದ ಕೃಷ್ಣ ಪಟಗಾರ ಎನ್ನುವ ಬಡ ವ್ಯಕ್ತಿಯ ಮನೆಗೆ ರಾಜೀವ ಗಾಂಧಿ ವಿದ್ಯುದೀಕರಣ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡಲು ಗುತ್ತಿಗೆದಾರರು~ ಕರೆಂಟ್ ಲೈನ್ ಎಳೆಯಲು 25 ಸಾವಿರ ರೂ. ಖರ್ಚಾಗಿದೆ~ ಎಂದು ಫಲಾನುಭವಿ ಗಳಿಂದ ಹಣ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ~ ಎಂದು ಆರೋಪಿಸಿದರು.ಅದಕ್ಕೆ  ಉತ್ತರಿಸಿದ ಕೆ.ಪಿ.ಟಿ.ಸಿ. ಎಲ್. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎನ್. ಪಟಗಾರ,   `ಮಳೆಗಾಲದಲ್ಲಿ ಬಿದ್ದ ವಿದ್ಯುತ್ ಕಂಬ ಗಳನ್ನು ಬದಲಾಯಿಸುವಾಗ ಸ್ಥಳಿಯ ಜನಪ್ರತಿನಿಧಿಗಳು ಸೇರಿದಂತೆ ಯಾರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆ ಇಲಾ ಖೆಯ ನಿಯಾಮವಳಿಗಳಲ್ಲಿ ಅವಕಾಶ ವಿಲ್ಲ.

 

ವಾಸ್ತವದಲ್ಲಿ ಕಾರ್ಯರೂಪಕ್ಕೆ ಬಾರದೆ ದಾಖಲೆಯಲ್ಲಿ ಮಾತ್ರ ಕೆಲಸ ತೋರಿಸುವ ಪಂಚಾಯಿತಿ ಮಟ್ಟದ  ಸೇವಾ ಕೌಂಟರ್‌ಗಳಿಗೆ ಹಣ ಪಾವತಿ ಮಾಡುವುದನ್ನು ತಡೆಹಿಡಿಯಲಾಗು ವುದು~ ಎಂದರು.ವಿದ್ಯುತ್ ಗ್ರಾಹಕರ ಸಂಘದ ಅಧ್ಯಕ್ಷ ಎಸ್.ಕೆ. ಹೆಗಡೆ, `ವಿದ್ಯುತ್ ಬಿಲ್ ನೀಡಲು ಗ್ರಾಮೀಣ ಪ್ರದೇಶಗಳಿಗೆ ಹೋಗುವವರು ಕಡ್ಡಾಯವಾಗಿ ಇರ ಬೇಕಾದ ಸಮವಸ್ತ್ರ ಧರಿಸುತ್ತಿಲ್ಲ. ಇದರಿಂದ ಹಳ್ಳಿಗಳ ಮನೆಗಳಲ್ಲಿ ಇರುವ ಒಬ್ಬಂಟಿ ಮಹಿಳೆ, ವೃದ್ದರಿಗೆ ಬಿಲ್ ನೀಡುವವರನ್ನು ಸುಲಭವಾಗಿ ಗುರುತಿ ಸುವುದು ಸಾಧ್ಯವಾಗುವದಿಲ್ಲ.

 

ಅದೇ ರೀತಿ ಅವರಿಗೆ ಗುರುತಿನ ಕಾರ್ಡ್ ಅನ್ನೂ ನೀಡುವಂತಾಗಬೇಕು~ ಎಂದರು. ಅದಕ್ಕೆ ಆರ್.ಎನ್. ಪಟಗಾರ, ` ಸಮವಸ್ತ್ರ ಧರಿಸಿ ಬೀಲ್ ನಿಡಲು ಬರುವವರ ಬಗ್ಗೆ ತಮಗೆ ತಕ್ಷಣ ದೂರು ನೀಡಿ~ ಎಂದರು. ಸಭೆಯಲ್ಲಿ ಕೆಪಿಟಿಸಿ ಎಲ್ ಗ್ರಾಮೀಣ ವಿಭಾಗ ಎಂಜಿನಿಯರ್ ನಾಗರಾಜ ಹೊಂಬಾಳೆ ಮೊದಲಾದವರಿದ್ದರು.ಈಜು ಸ್ಪರ್ಧೆ:   ಹೆಸ್ಕಾಂ ಚಾಂಪಿಯನ್ಹಾವೇರಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣ ಹಾಗೂ ಹೆಸ್ಕಾಂ ನೌಕರರ ಸಭಾ ಭವನದಲ್ಲಿ ಮಂಗಳವಾರ ಆರಂಭವಾದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಅಂತರ್ ಕಂಪೆನಿಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಮೊದಲ ದಿನದ ಈಜು ಸ್ಪರ್ಧೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ, ಭಾರ ಎತ್ತುವ ಸ್ಪರ್ಧೆಯಲ್ಲಿ ಮಂಗಳೂರ ವಿದ್ಯುತ್ ಸರಬರಾಜು ಕಂಪೆನಿ ಚಾಂಪಿ ಯನ್ ಆಗಿ ಹೊರಹೊಮ್ಮಿವೆ.ಈಜು ಸ್ಪರ್ಧೆಯಲ್ಲಿ 30 ಅಂಕ ಪಡೆದ ಹೆಸ್ಕಾಂ ಚಾಂಪಿಯನ್ ಆದರೆ, 28 ಅಂಕ ಪಡೆದ ಮೆಸ್ಕಾಂ ದ್ವೀತಿಯ ಹಾಗೂ 11 ಅಂಕ ಪಡೆದ ಚೆಸ್ಕಾಂ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡವು.ಈಜು ಫಲಿತಾಂಶ: 50 ಮೀಟರ ಫ್ರೀಸ್ಟೈಲ್‌ನಲ್ಲಿ ಮೆಸ್ಕಾಂನ ಎಸ್. ಎನ್. ದೇವೆಂದ್ರ (0.42.41 ಸೆ.) ಪ್ರಥಮ, ಚೆಸ್ಕಾಂನ ಮಹ್ಮದ್ ರಫಿ (0.43.25 ಸೆ.) ದ್ವೀತಿಯ ಹಾಗೂ ಬೆಸ್ಕಾಂನ ರವೀಂದ್ರನಾಥ (0.44.33ಸೆ.) ತೃತೀಯ ಸ್ಥಾನ ಪಡೆದರು.50 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ಮೆಸ್ಕಾಂನ ಜನಾರ್ದನ ನಾಯಕ (0.51.38ಸೆ.) ಪ್ರಥಮ, ಹೆಸ್ಕಾಂನ ಎಚ್.ಆರ್. ಕುಲಕರ್ಣಿ (1.00.56 ಸೆ.) ದ್ವಿತೀಯ ಹಾಗೂ ಚೆಸ್ಕಾಂನ ಮಂಜುನಾಥ. ಎಂ.ವಿ. (1.05.37 ಸೆ.) ತೃತೀಯ ಸ್ಥಾನ ಗಳಿಸಿದರು.100 ಮೀಟರ್ ಫ್ರೀಸ್ಟೈಲ್‌ನಲ್ಲಿ ಹೆಸ್ಕಾಂನ ವಿ.ಡಿ.ಬೀಳಗಿ (1.48.34 ಸೆ.) ಪ್ರಥಮ, ಮೆಸ್ಕಾಂನ ಜಗದೀಶ (1.54.97 ಸೆ.) ದ್ವೀತಿಯ ಹಾಗೂ ಚೆಸ್ಕಾಂನ ಮಹ್ಮದ್ ರಫಿ (2.02. 91ಸೆ.) ತೃತೀಯ ಸ್ಥಾನ ಪಡೆದರು.

50 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಹೆಸ್ಕಾಂನ ಎಚ್. ಆರ್. ಕುಲಕರ್ಣಿ (0.56.06 ಸೆ.) ಪ್ರಥಮ, ಹೆಸ್ಕಾಂನ ಡಿ.ಬಿ. ನಂದರಗಿ (1.06.91ಸೆ.) ದ್ವೀತಿಯ ಹಾಗೂ ಮೆಸ್ಕಾಂನ ಮಾರ್ತಾಂಡಪ್ಪ ಆರ್. ಕರಿಯಪ್ಪನವರ (1.09.00 ಸೆ.) ತೃತೀಯ ಸ್ಥಾನ ಪಡೆದರು.ಕ್ಯಾ. ಜೋಗಿ ಸುಬೇದಾರ ಪುತ್ಥಳಿ ಮೆರವಣಿಗೆಕಾರವಾರ: ಒಂದನೇ ಮಹಾಯುದ್ಧ ದಲ್ಲಿ ಹೋರಾಡಿದ, ಲಂಡನ್‌ನ ಬಂಕಿಂ ಗ್‌ಹ್ಯಾಮ್ ಅರಮನೆಯಲ್ಲಿ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡ ಕ್ಯಾಪ್ಟನ್, ದಿ. ಜೋಗಿ ಸುಬೇದಾರ ಅವರ ಕಂಚಿನ ಪುತ್ಥಳಿ ಯನ್ನು ತಾಲ್ಲೂಕಿನ ಸದಾಶಿವಗಡದಲ್ಲಿ ಪ್ರತಿಷ್ಟಾಪಿಸಲು ಕೊಂಕಣ ಮರಾಠ ಮಂಡಲ ನಿರ್ಧರಿಸಿದೆ.ಮಾ. 23ರಂದು ಈ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು ಮಾ. 22 ರಂದು ನಗರದಲ್ಲಿ ಈ ಪುತ್ಥಳಿಯ ಮೆರವಣಿಗೆ ನಗರದಲ್ಲಿ ನಡೆಯಲಿದೆ. ಸುಬೇದಾರ ಅವರ ಅಭಿಮಾನಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.