`ಕೆಲ ಆಟಗಾರರಿಂದಲೇ ಕ್ರಿಕೆಟ್‌ಗೆ ಅಪಖ್ಯಾತಿ'

ಶುಕ್ರವಾರ, ಜೂಲೈ 19, 2019
26 °C

`ಕೆಲ ಆಟಗಾರರಿಂದಲೇ ಕ್ರಿಕೆಟ್‌ಗೆ ಅಪಖ್ಯಾತಿ'

Published:
Updated:

ಚೆನ್ನೈ (ಪಿಟಿಐ): ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಕೆಲವು ಆಟಗಾರರು ಕ್ರಿಕೆಟ್‌ಗೆ ಘನತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ.`ಭಾರತ ಮಾತ್ರವಲ್ಲ ವಿಶ್ವ ಕ್ರಿಕೆಟ್‌ನ ಅವ್ಯವಸ್ಥೆಗೂ ಆಟಗಾರರೇ ಕಾರಣ. ಚೆಂಡು ವಿರೂಪಗೊಳಿಸುವ ಕೆಟ್ಟ ಅಭ್ಯಾಸ ಆಟಗಾರರಿಂದಲೇ ಬಂದದ್ದು. ಆದ್ದರಿಂದ ವಿಕೆಟ್ ಪಡೆದ ಬಳಿಕ ಇದೀಗ ಚೆಂಡನ್ನು ಪರೀಕ್ಷೆಗಾಗಿ ಅಂಪೈರ್‌ಗೆ ನೀಡಲಾಗುತ್ತದೆ' ಎಂದೂ ಅವರು ಹೇಳಿದ್ದಾರೆ.`ಪಿಚ್‌ನ ಉದ್ದ, ಚೆಂಡಿನ ತೂಕ, ಸ್ಟಂಪ್‌ಗಳು ಸೇರಿದಂತೆ ಯಾವುದರಲ್ಲೂ ಬದಲಾವಣೆಯಾಗಿಲ್ಲ. ಆದರೆ ಆಟಗಾರರ ನಡವಳಿಕೆಯಲ್ಲಿ ಬದಲಾವಣೆ ಆಗಿದೆ' ಎಂದೂ ಅವರು ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry