ಗುರುವಾರ , ಮೇ 13, 2021
17 °C

ಕೆಲ ರೈಲು ಸಂಚಾರ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಚಿಕ್ಕಮಗಳೂರು ಜಿಲ್ಲೆಯ ಬೀರೂರು- ನಾಗವಂಗಲ- ಅಜ್ಜಂಪುರ ನಡುವಣ ರೈಲು ಮಾರ್ಗದಲ್ಲಿ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಜೂನ್ 12ರಿಂದ 16ರ ವರೆಗೆ ಕೆಲವು ರೈಲುಗಳ ತಡವಾಗಿ ಸಂಚರಿಸಿದರೆ ಮತ್ತೆ ಕೆಲವು  ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವ ಫಾಸ್ಟ್ ಪ್ಯಾಸೆಂಜರ್ ಇದೇ 12 ರಂದು ಕಡೂರು ರೈಲು ನಿಲ್ದಾಣದಿಂದ 40 ನಿಮಿಷ ತಡವಾಗಿ ಹೊರಡಲಿದೆ. ಮೈಸೂರು- ಶಿವಮೊಗ್ಗ ಫಾಸ್ಟ್ ಪ್ಯಾಸೆಂಜರ್ ಬೀರೂರು ನಿಲ್ದಾಣದಿಂದ 13 ರಂದು 20 ನಿಮಿಷ ತಡವಾಗಿ ಹೊರಡಲಿದೆ.ಕೂಚುವೇಲಿ- ಹುಬ್ಬಳ್ಳಿ ಎಕ್ಸ್‌ಪ್ರೆಸ್ 14ರಂದು ಬೀರೂರಿನಿಂದ 45 ನಿಮಿಷ ತಡವಾಗಿ ಹೊರಡಲಿದೆ. ದಾದರ್- ಪುದುಚೇರಿ ಚಾಲುಕ್ಯ ಎಕ್ಸ್‌ಪ್ರೆಸ್ ಇದೇ 16ರಂದು ಅಜ್ಜಂಪುರ ನಿಲ್ದಾಣದಿಂದ 22 ನಿಮಿಷ ತಡವಾಗಿ ಹೊರಡಲಿದೆ.ರದ್ದಾಗಿರುವ ರೈಲುಗಳ ವಿವರ: ಶಿವಮೊಗ್ಗ-ಬೀರೂರು ಪ್ಯಾಸೆಂಜರ್ ಸಂಚಾರವನ್ನು 13 ರಿಂದ 16ರವರೆಗೆ ರದ್ದುಪಡಿಸಲಾಗಿದೆ. ಬೆಂಗಳೂರು- ಶಿವಮೊಗ್ಗ ಫಾಸ್ಟ್ ಪ್ಯಾಸೆಂಜರ್ ಸೇವೆಯನ್ನು 14 ರಿಂದ 16ರವರೆಗೆ ರದ್ದುಪಡಿಸಲಾಗಿದೆ. ಶಿವಮೊಗ್ಗ- ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ಸಂಚಾರವನ್ನು 14 ರಿಂದ 16ರವರೆಗೆ ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.