ಕೆಲ ಶಿಫಾರಸುಗಳಿಗೆ ಕೆಎಸ್ಸಿಎ ವಿರೋಧ

ಬೆಂಗಳೂರು: ‘ಮೂರು ವರ್ಷಗಳ ಅಧಿಕಾರವಧಿ ಮುಗಿದ ಬಳಿಕ ಮತ್ತೆ ಕ್ರಿಕೆಟ್ ಆಡಳಿತಕ್ಕೆ ಬರುವಂತಿಲ್ಲ. ನಡುವೆ ಅಂತರ ಇರಬೇಕು’ ಎನ್ನುವ ನಿವೃತ್ತ ನ್ಯಾಯಮೂರ್ತಿ ಲೋಧಾ ನೇತೃತ್ವದ ಸಮಿತಿಯ ಶಿಫಾರಸಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ವಿರೋಧ ವ್ಯಕ್ತಪಡಿಸಿದೆ.
ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಈ ಲೋಧಾ ಸಮಿತಿ ವರದಿ ಕುರಿತು ಚರ್ಚೆ ನಡೆಯಿತು.
‘ಲೋಧಾ ಸಮಿತಿ ಮಾಡಿರುವ ಬಹುತೇಕ ಶಿಫಾರಸುಗಳನ್ನು ಅಳವಡಿಸಿ ಕೊಳ್ಳಲು ನಿರ್ಧರಿಸಲಾಗಿದೆ. ಕೆಲ ಶಿಫಾರಸುಗಳಿಗಷ್ಟೇ ವಿರೋಧವಿದೆ’ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.