ಕೆವಿಎಲ್: ಜೀವ ವಿಮಾ ನಿಗಮ ತಂಡಕ್ಕೆ ಗೆಲುವು

7

ಕೆವಿಎಲ್: ಜೀವ ವಿಮಾ ನಿಗಮ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಪ್ರಬಲ ಪ್ರತಿರೋಧ ಎದುರಾದರೂ ಸಮರ್ಥ ಹೋರಾಟ ತೋರಿದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತಂಡ ಚೊಚ್ಚಲ ಕರ್ನಾಟಕ ವಾಲಿ ಲೀಗ್‌ನ ಐದನೇ ಹಾಗೂ ಅಂತಿಮ ಆವೃತ್ತಿಯ ಶನಿವಾರದ ಪಂದ್ಯದಲ್ಲಿ 25-19, 25-17, 25-23ರಲ್ಲಿ ಡಿವೈಎಸ್‌ಎಸ್ ತಂಡವನ್ನು ಮಣಿಸಿತು.ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 60 ನಿಮಿಷಗಳ ಕಾಲ ಉಭಯ ತಂಡಗಳ ನಡುವೆ ಹೋರಾಟ ನಡೆಯಿತು. ವಿಜಯಿ ತಂಡದ ಪವನ್ ಹಾಗೂ ಅವಿನಾಶ್ ಉತ್ತಮ ಪ್ರದರ್ಶನ ತೋರಿದರು.ಎಂಇಜಿ ಜಯಭೇರಿ: ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ತಂಡ 25-21, 25-22, 25-17ರಲ್ಲಿ ಎಎಸ್‌ಸಿ ವಿರುದ್ಧ ಜಯಭೇರಿ ಬಾರಿಸಿತು.ಎಲ್‌ಐಸಿ ವಿರುದ್ಧ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ಎಂಇಜಿ ಈ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಇದರ ಜೊತೆಗೆ ಮೂರು ಅಂಕಗಳನ್ನು ಪಡೆಯಿತು. ಎಎಸ್‌ಸಿ ಮೊದಲ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡದ ವಿರುದ್ಧ ವಿಜಯ ಪಡೆದು ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆದಿತ್ತು. ಶುಕ್ರವಾರ ರಾತ್ರಿ ನಡೆದ ಕೊನೆಯ ಪಂದ್ಯದಲ್ಲಿ ಎಎಸ್‌ಸಿ 25-23, 25-20, 25-22ರಲ್ಲಿ ಕೆಎಸ್‌ಪಿ ಎದುರು ಜಯ ಸಾಧಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry