ಕೆವಿಎಲ್: ಪೊಲೀಸ್ ತಂಡಕ್ಕೆ ಜಯ

7

ಕೆವಿಎಲ್: ಪೊಲೀಸ್ ತಂಡಕ್ಕೆ ಜಯ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡದವರು ಚೊಚ್ಚಲ ಕರ್ನಾಟಕ ವಾಲಿ ಲೀಗ್ (ಕೆವಿಎಲ್) ಮೂರನೇ ಆವೃತ್ತಿಯ ಮಂಗಳವಾರದ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಮುನ್ಸಿಪಲ್ ಕ್ರೀಡಾಂಗಣದಲ್ಲಿ  ನಡೆದ ಪಂದ್ಯದಲ್ಲಿ ಕೆಎಸ್‌ಪಿ 26-24, 16-25, 26-24, 25-15ರಲ್ಲಿ ಡಿವೈಎಸ್‌ಎಸ್ ತಂಡವನ್ನು ಸೋಲಿಸಿತು.ದಿನದ ಇನ್ನೊಂದು ಪಂದ್ಯದಲ್ಲಿ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) 25-21, 26-24, 25-17ರಲ್ಲಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಎದುರು ಗೆಲುವು ಸಾಧಿಸಿತು. ವಿಜಯಿ ತಂಡದ ಬಿಪಿನ್ ಹಾಗೂ ಸೆಲ್ವಂ ಉತ್ತಮ ಪ್ರದರ್ಶನ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry