ಕೆವಿಎಲ್: ಬಿಎಸ್‌ಎನ್‌ಎಲ್ ತಂಡ ಚಾಂಪಿಯನ್

7

ಕೆವಿಎಲ್: ಬಿಎಸ್‌ಎನ್‌ಎಲ್ ತಂಡ ಚಾಂಪಿಯನ್

Published:
Updated:

ಬೆಂಗಳೂರು: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ಚೊಚ್ಚಲ ಕರ್ನಾಟಕ ವಾಲಿ ಲೀಗ್‌ನಲ್ಲಿ (ಕೆವಿಎಲ್) ಚಾಂಪಿಯನ್ ಆಯಿತು.ಒಟ್ಟು 20 ಪಂದ್ಯಗಳಿಂದ ಈ ತಂಡ 46 ಅಂಕಗಳನ್ನು ಕಲೆ ಹಾಕಿತು. ಮಂಗಳವಾರ ನಡೆದ ಫೈನಲ್ ಹಣಾಹಣಿಯಲ್ಲಿ ಬಿಎಸ್‌ಎನ್‌ಎಲ್ 25-17, 25-15, 25-21ರಲ್ಲಿ ಎಎಸ್‌ಸಿ ತಂಡವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು. ಈ ತಂಡ 50,000 ರೂಪಾಯಿ ಬಹುಮಾನ ತನ್ನದಾಗಿಸಿ ಕೊಂಡಿತು. ವಿಜಯಿ ತಂಡದ ರವಿ ಕುಮಾರ್, ಮಾರುತಿ ಜಿ. ನಾಯಕ್, ಕಾರ್ತಿಕ್, ಶ್ರವಣ್ ಹಾಗೂ ಮಂಜು ನಾಥ್ ಅವರು ಉತ್ತಮ ಪ್ರದರ್ಶನ ನೀಡಿದರು.42 ಅಂಕಗಳನ್ನು ಗಳಿಸಿದ ಭಾರತೀಯ ಜೀವ ವಿಮಾ ನಿಗಮ ದ್ವಿತೀಯ ಸ್ಥಾನ ಪಡೆದು 40,000 ರೂ. ಬಹುಮಾನ ತಮ್ಮದಾಗಿಸಿಕೊಂಡರು. ಮೂರನೇ ಸ್ಥಾನ ಎಎಸ್‌ಸಿ (30,000 ರೂ. ಬಹುಮಾನ) ಮತ್ತು ನಾಲ್ಕನೇ ಸ್ಥಾನ ಎಂಇಜಿ (20,000 ರೂ.) ಪಾಲಾದವು.ವೈಯಕ್ತಿಕ ಪ್ರಶಸ್ತಿಗಳು: ಅತ್ಯುತ್ತಮ ಸೆಟ್ಟರ್ ವಿನಾಯಕ್ (ಡಿವೈಎಸ್‌ಎಸ್),  ಅತ್ಯುತ್ತಮ ಬ್ಲ್ಯಾಕರ್ ಎ. ಕಾರ್ತಿಕ್ (ಬಿಎಸ್‌ಎನ್‌ಎಲ್), ಅತ್ಯುತ್ತಮ ಅಟ್ಯಾ ಕರ್ ಜಿತು ಥಾಮಸ್ (ಎಎಎಸ್‌ಸಿ), ಅತ್ಯುತ್ತಮ ಆಲ್‌ರೌಂಡರ್ ನಾಗೇಶ್ (ಕೆಎಸ್‌ಪಿ),  ಅತ್ಯುತ್ತಮ     ಲಿಬಿರೊ ಶ್ರವಣ್‌ಯಾದವ್  (ಬಿಎಸ್‌ಎನ್‌ಎಲ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry