`ಕೆವಿನ್ ಕೇರ್ ಸಾಮರ್ಥ್ಯ ಪ್ರಶಸ್ತಿ'ಗೆ ಅರ್ಜಿ ಆಹ್ವಾನ

7

`ಕೆವಿನ್ ಕೇರ್ ಸಾಮರ್ಥ್ಯ ಪ್ರಶಸ್ತಿ'ಗೆ ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ದೈಹಿಕ ಮಿತಿಗಳನ್ನು ಮೀರಿ ಸಾಧನೆ ಮಾಡಿದ ವ್ಯಕ್ತಿಗಳು ಮತ್ತು ಇಂಥವರಿಗಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ 11ನೇ `ಕೆವಿನ್ ಕೇರ್ ಸಾಮರ್ಥ್ಯ ಪ್ರಶಸ್ತಿ' ನೀಡಲು ನಾಮ ನಿರ್ದೇಶನ ಮತ್ತು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಕೆವಿನ್ ಕೇರ್ ಕೈಗಾರಿಕಾ ಸಂಸ್ಥೆ, ನ್ಯಾಷನಲ್ ಕ್ಲಾಸ್ ಡಿಸಬಿಲಿಟಿ ಮತ್ತು ಎಬಿಲಿಟಿ ಫೌಂಡೇಶನ್‌ಗಳು ಸ್ಥಾಪಿಸಿರುವ ಈ ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು ಎರಡು ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ. 2003ರಿಂದ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದೆ.ದೈಹಿಕ ಮತ್ತು ಮಾನಸಿಕ ಮಿತಿಗಳನ್ನು ಮೀರಿ ಸಾಧನೆ ಮಾಡಿದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಬಗ್ಗೆ ಮಾಹಿತಿ ಇರುವವರು ಪ್ರಶಸ್ತಿಗೆ ನಾಮನಿರ್ದೇಶನ ಅರ್ಜಿಗಳನ್ನು ಕಳುಹಿಸಬಹುದು. ಪ್ರಶಸ್ತಿಯ ವಿತರಣಾ ಸಮಾರಂಭವು 2013ನೇ ಮಾರ್ಚ್ ತಿಂಗಳಲ್ಲಿ ಚೆನ್ನೈನಲ್ಲಿ ನಡೆಯಲಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನ.ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ವಿಳಾಸ ಡಿಡಿಡಿ.್ಚಜ್ಞಿಚ್ಟಛಿ.್ಚಟಞ ಅಥವಾ ಡಿಡಿಡಿ.ಚಿಜ್ಝಿಜಿಠಿಢ್ಛಟ್ಠ್ಞಠಿಜಿಟ್ಞ.ಟ್ಟಜ ಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 044 - 2452 0016 / 2452 3013 ಅನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry