ಕೆ.ವಿ. ವೆಂಕಟೇಶ ನಾಯಕ್ ನಿಧನ

7

ಕೆ.ವಿ. ವೆಂಕಟೇಶ ನಾಯಕ್ ನಿಧನ

Published:
Updated:

ಬೆಂಗಳೂರು: ರಾಜಾಜಿನಗರ ಸಣ್ಣ ಕೈಗಾರಿಕೆಗಳ ಸಂಘ (ಎಸ್‌ಎಸ್‌ಐ) ಪ್ರದೇಶದ 5ನೇ ಬ್ಲಾಕ್‌ನಲ್ಲಿರುವ  ಮಾರ್ಡನ್ ಪ್ರೊಸೆಸ್ ಪ್ರಿಂಟರ್ಸ್‌ನ ಮಾಲೀಕ ಕೆ.ವಿ. ವೆಂಕಟೇಶ ನಾಯಕ್ (86) ಬುಧವಾರ ಬೆಳಗಿನ ಜಾವ ನಗರದಲ್ಲಿ ನಿಧನ ಹೊಂದಿದರು.ಮೃತರು ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಇವರ ಪತ್ನಿ ಕೆ. ಪದ್ಮಾವತಿ ನಾಯಕ್ ಈಗಾಗಲೇ ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆ ಸಾಯಂಕಾಲ 4 ಗಂಟೆಗೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನೆರವೇರಿತು.ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ನಾಯಕ್ ಲವಲವಿಕೆಯಿಂದಲೇ ಕಚೇರಿಗೆ ಹೋಗಿ ಬರುತ್ತಿದ್ದರು. ಮಂಗಳವಾರ ಕೂಡ ಬೆಳಿಗ್ಗೆ ಆರಾಮದಿಂದಲೇ ಕಚೇರಿಗೆ ಹೊರಟವರು ಸಂಜೆ 6 ಗಂಟೆಗೆ ವಾಪಸ್ಸಾಗಿದ್ದರು. ಬೆಳಗಿನ ಜಾವ 2.45ಕ್ಕೆ ಅವರು ನಿಧನರಾದರು ಎಂದು ಕುಟುಂಬ ವರ್ಗ ತಿಳಿಸಿದೆ.1976ರಿಂದ ಸುಮಾರು 25 ವರ್ಷಗಳ ಕಾಲ `ಸುಧಾ~ ವಾರಪತ್ರಿಕೆ ಹಾಗೂ `ಮಯೂರ~ ಮಾಸಪತ್ರಿಕೆಯನ್ನು ಮಾರ್ಡನ್ ಪ್ರೊಸೆಸ್ ಪ್ರಿಂಟರ್ಸ್‌ನಲ್ಲಿ ಮುದ್ರಿಸಲಾಗುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry