ಭಾನುವಾರ, ಮೇ 16, 2021
28 °C

ಕೆ.ಶೆಟ್ಟಹಳ್ಳಿ ಶಾಲೆ ವಿದ್ಯಾರ್ಥಿಗಳ ಯೋಗ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟ ಹಳ್ಳಿ ಸರ್ಕಾರಿ ಶಾಲೆಯ ವಿದ್ಯಾ ರ್ಥಿಗಳು ನಾಲ್ಕು ವರ್ಷಗಳಿಂದ ದಸರಾ ಸೇರಿದಂತೆ ವಿವಿಧ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ನಿರಂತರ ವಾಗಿ ಪ್ರಶಸ್ತಿ ಪಡೆಯುತ್ತಿದ್ದಾರೆ.ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗ ಳನ್ನು ಒಳಗೊಂಡ 15 ಮಂದಿಯ ತಂಡ ಆಕರ್ಷಕ ಯೋಗ ಪ್ರದರ್ಶನ ನೀಡುವ ಮೂಲಕ ಜನಮನ್ನಣೆ ಗಳಿಸುತ್ತಿದೆ. 2008ರಿಂದ ಸತತ ದಸರಾ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಈ ತಂಡ ಇದುವರೆಗೆ 15ಕ್ಕೂ ಹೆಚ್ಚು ಪ್ರಶಸ್ತಿ ಗಳನ್ನು ಬಾಚಿಕೊಂಡಿದೆ.

 

2010ರಲ್ಲಿ ಮೈಸೂರಿನ ಬೂದುಗುಂಟೆ ಕಾಮಾಕ್ಷಮ್ಮ ಛತ್ರದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯ 11-18 ವಯೋಮಾನದ ವಿಭಾಗದಲ್ಲಿ ಕೆ.ಶೆಟ್ಟಹಳ್ಳಿ ಶಾಲೆಯ ವಿದ್ಯಾರ್ಥಿ ಎಸ್.ಕಾರ್ತಿಕ್ ಪ್ರಥಮ, 9-11 ವರ್ಷದ ಸ್ಪರ್ಧೆಯಲ್ಲಿ ಎಸ್. ಎ.ಶರ್ಮಿಳಾ- ದ್ವಿತೀಯ ಸ್ಥಾನ ಪಡೆ ದಿದ್ದಾರೆ. ಅದೇ ಶಾಲೆಯ ಎಸ್. ವಿವೇಕ್ ನಾಲ್ಕನೇ ಸ್ಥಾನ ಗಳಿಸಿದ್ದಾರೆ.2010ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್.ಕಾರ್ತಿಕ್, ಎಸ್.ವಿವೇಕ್ ಹಾಗೂ ಲಾವಣ್ಯ ಜಿಲ್ಲೆ ಹಾಗೂ ರಾಜ್ಯ ವಿಭಾಗ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಈ ಯೋಗಪ ಟುಗಳ ತಂಡದ ತರಬೇತುದಾರ ಅಪ್ಪಾಜಿ ದಸರಾ ಯೋಗ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಭಾಗವಹಿಸಿ ಎರಡನೇ ಸ್ಥಾನ ದಕ್ಕಿಸಿಕೊಂಡಿದ್ದಾರೆ. ರಾಜ್ಯ, ಅಂತರ ರಾಜ್ಯ ಸ್ಪರ್ಧೆಗಳಲ್ಲಿ ಕೆ.ಶೆಟ್ಟಹಳ್ಳಿ ತಂಡ ಸತತವಾಗಿ ಪಾಲ್ಗೊಳ್ಳುತ್ತಿದೆ.

ತಾಲ್ಲೂಕು ಕೇಂದ್ರದಲ್ಲಿ ಈಚೆಗೆ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಯೋಗ ಪ್ರದರ್ಶನ ನೀಡಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೆಚ್ಚುಗೆ ಪಡೆದಿದೆ. `ನಮ್ಮ ತಂಡದ 15 ಮಂದಿ ಯೋಗಪಟುಗಳು ಕಳೆದ 4 ವರ್ಷಗಳಿಂದ ಒಂದಿಲ್ಲೊಂದು ಬಹುಮಾನ ಗಳಿಸುತ್ತಿದ್ದಾರೆ. ಶಾಲೆಯ ಶಿಕ್ಷಕರು ಹಾಗೂ ಪೋಷಕರ ಸಹಕಾರ ಜತೆಗೆ ನಿರಂತರ ಅಭ್ಯಾಸಿದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತರಬೇತುದಾರ ಅಪ್ಪಾಜಿ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.