ಭಾನುವಾರ, ನವೆಂಬರ್ 17, 2019
28 °C

ಕೆಸಿಡಿ ಕಾಲೇಜಿಗೆ ಸಮಗ್ರ ವೀರಾಗ್ರಣಿ

Published:
Updated:

ಧಾರವಾಡ: ಇಲ್ಲಿಯ ಜೆಎಸ್‌ಎಸ್ ಕಾಲೇಜಿನ ಆಶ್ರಯದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸಂಕಲ್ಪ-2013 ರಾಜ್ಯಮಟ್ಟದ ಮಾಹಿತಿ ತಂತ್ರಜ್ಞಾನ ಸ್ಪರ್ಧೆಯಲ್ಲಿ, ಒಟ್ಟು ರಾಜ್ಯದ ಬೇರೆ ಬೇರೆ ವಿಭಾಗಗಳಿಂದ 18 ಕಾಲೇಜುಗಳು ಸ್ಪರ್ಧಿಸಿದ್ದವು.ಇದರಲ್ಲಿ ಕರ್ನಾಟಕ ವಿಜ್ಞಾನ ಕಾಲೇಜಿನ ಗಣಕಯಂತ್ರ ವಿಭಾಗದ ಬಿಎಸ್‌ಸಿ ವಿದ್ಯಾರ್ಥಿಗಳಾದ ಕೇದಾರೇಶ್ವರ ಚೌಧರಿ, ಶ್ರೀಧರ ಕುಲಕರ್ಣಿ ಹಾಗೂ ಗೌರಿ ನರಗುಂದಕರ ಪ್ಲೇಸ್‌ಮೆಂಟ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡರು. ಪ್ಲೇಸ್‌ಮೆಂಟ್ ಅಧಿಕಾರಿ ರಾಜೀವ ಹಿರೇಮಠ ಅವರು ತಂಡವನ್ನು ಮುನ್ನಡೆಸಿದ್ದರು.ಇದರಂತೆ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಪ್ರಸ್ತಾವನ ಸ್ಪರ್ಧೆಯಲ್ಲಿ ರವೀಂದ್ರ, ಸಾಗರ.ಸಿ.ಎ. ವಿಶಾಲ ಪಟ್ಟೇದ, ಶೀತಲ್ ಇನಾಮದಾರ್, ಲಕ್ಷ್ಮಣ ಎಂ.ಬಿ. ಪ್ರೀತಿ ಬದಿ, ಶ್ರುತಿ ಸುಣಗಾರ ಮತ್ತು ವಿಶಾಖ ಹೆಗಡೆ ಅವರು ದ್ವಿತೀಯ ಸ್ಥಾನ ಪಡೆದು ಸಮಾಧಾನಕರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡರು.

ಪ್ರತಿಕ್ರಿಯಿಸಿ (+)