ಕೆ. ಜಿ. ಬಾಲಕೃಷ್ಣನ್ ಅಕ್ರಮ ಆಸ್ತಿ ಸಂಪಾದನೆ: ತನಿಖೆಯ ವಿವರಕ್ಕೆ ಆದೇಶ

7

ಕೆ. ಜಿ. ಬಾಲಕೃಷ್ಣನ್ ಅಕ್ರಮ ಆಸ್ತಿ ಸಂಪಾದನೆ: ತನಿಖೆಯ ವಿವರಕ್ಕೆ ಆದೇಶ

Published:
Updated:
ಕೆ. ಜಿ. ಬಾಲಕೃಷ್ಣನ್ ಅಕ್ರಮ ಆಸ್ತಿ ಸಂಪಾದನೆ: ತನಿಖೆಯ ವಿವರಕ್ಕೆ ಆದೇಶ

ನವದೆಹಲಿ, (ಪಿಟಿಐ):  ದುರ್ನಡತೆ ಹಾಗೂ ಅಕ್ರಮ ಆಸ್ತಿ ಸಂಪಾದನೆ  ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಹಾಗೂ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಅವರ ವಿರುದ್ಧ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರಕ್ಕೆ ಸೂಚಿಸಿದೆ.ಬಾಲಕೃಷ್ಣನ್ ಅವರು 2004-2009ರ ಅವಧಿಯಲ್ಲಿ ತಮ್ಮ ಸಂಬಂಧಿಗಳ ಹೆಸರಲ್ಲಿ  40 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಅಕ್ರಮ ಆಸ್ತಿ ಗಳಿಸಿದ್ದು, ಇದನ್ನು ತನಿಖೆಗೆ ಒಳಪಡಿಸುವಂತೆ ಸರ್ಕಾರಕ್ಕೆ ನಿರ್ದೇ ಶನ ನೀಡಲು ಕೋರಿ ಸರ್ಕಾರೇತರ ಸಂಸ್ಥೆಯೊಂದು ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ಅವರನ್ನು ಒಳಗೊಂಡ ಪೀಠವು, ತನಿಖೆ ನಡೆಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಒಂದು ತಿಂಗಳ ಒಳಗಾಗಿ ಉತ್ತರ ನೀಡುವಂತೆ ಅಟಾರ್ನಿ ಜನರಲ್ ಜಿ. ಇ. ವಹನ್ವತಿ ಅವರಿಗೆ ನಿರ್ದೇಶನ ನೀಡಿದೆ.ಇದಕ್ಕೆ ಪ್ರತಿಕ್ರಿಯಿಸಿದ ವಹನ್ವತಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ವಿಷಯವನ್ನು ಪರಿಶೀಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಬಾಲಕೃಷ್ಣನ್ ಅವರು 2007 ಜನವರಿ 14ರಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2010ರಲ್ಲಿ ನಿವೃತ್ತಿ ಹೊಂದಿದಾಗ ಅವರನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry