ಮಂಗಳವಾರ, ಮೇ 18, 2021
31 °C

ಕೆ-ಸೆಟ್ ಫಲಿತಾಂಶ: ಗಣಿತದಲ್ಲಿ ಶೂನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ಮೈಸೂರು ವಿಶ್ವವಿದ್ಯಾನಿಲಯ 2011ರ ಅಕ್ಟೋಬರ್ 23 ರಂದು ನಡೆಸಿದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)ಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಶೇ. 4.49ರಷ್ಟು ಅಭ್ಯರ್ಥಿಗಳು ಉಪನ್ಯಾಸಕ ಹುದ್ದೆಗೆ ಅರ್ಹತೆ ಪಡೆದಿದ್ದಾರೆ.ಒಟ್ಟು 40,903 ಅಭ್ಯರ್ಥಿಗಳು ರಾಜ್ಯದ 11 ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಈ ಪೈಕಿ ಪತ್ರಿಕೆ-1 ಹಾಗೂ ಪತ್ರಿಕೆ-2ರಲ್ಲಿ 13,343 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಅಂತಿಮವಾಗಿ 1,838 ಅಭ್ಯರ್ಥಿಗಳು ಉಪನ್ಯಾಸಕ ಹುದ್ದೆಗೆ ಅರ್ಹರಾಗಿದ್ದಾರೆ. ಆದರೆ, ಗಣಿತ ವಿಜ್ಞಾನ ವಿಷಯದಲ್ಲಿ ಪರೀಕ್ಷೆ ಬರೆದ 1,038 ಅಭ್ಯರ್ಥಿಗಳಲ್ಲಿ ಯಾರೂ ಅರ್ಹತೆ ಪಡೆದಿಲ್ಲ ಎಂದು ಕುಲಪತಿ ಪ್ರೊ. ವಿ.ಜಿ. ತಳವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.ಮೈಸೂರು ವಿವಿ ಕೆ-ಸೆಟ್ ಪರೀಕ್ಷೆಯ ನೋಡಲ್ ಕೇಂದ್ರವಾಗಿ ಪರೀಕ್ಷಾ ಕಾರ್ಯವನ್ನು ನಿರ್ವಹಿಸಿತ್ತು. ಫಲಿತಾಂಶ ಮತ್ತು ಅಂಕಗಳ ವಿವರಕ್ಕೆ ವಿವಿಯ ವೆಬ್‌ಸೈಟ್ http://kset.unimysore.ac.in  ಸಂಪರ್ಕಿಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.