ಕೇಂದ್ರದಿಂದ ಶೀಘ್ರವೇ ಸಲಹಾ ಪತ್ರ

7
ಅಭಿವ್ಯಕ್ತಿ ಮೊಟಕಿಗೆ ಐಟಿ ಕಾಯಿದೆ ದುರ್ಬಳಕೆ

ಕೇಂದ್ರದಿಂದ ಶೀಘ್ರವೇ ಸಲಹಾ ಪತ್ರ

Published:
Updated:

ನವದೆಹಲಿ (ಪಿಟಿಐ): ಕೆಲವು ರಾಜ್ಯಗಳು ಮಾಹಿತಿ ತಂತ್ರಜ್ಞಾನ ಕಾಯಿದೆಯ (ಐಟಿ ಕಾಯಿದೆ) ಕಲಂವೊಂದನ್ನು ಬಳಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವುದನ್ನು ತಡೆಗಟ್ಟಲು ಸೂಚಿಸಿ ಕೇಂದ್ರವು ಶೀಘ್ರವೇ ಸಲಹಾ ಪತ್ರವೊಂದನ್ನು ಪ್ರಕಟಿಸಲಿದೆ.`ಕೆಲವು ರಾಜ್ಯಗಳಲ್ಲಿ ಈ ಕಾಯಿದೆಯ 66ನೇ ಕಲಂನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದು ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ ಸರ್ಕಾರದ ಅಭಿಪ್ರಾಯ ಕೂಡ' ಎಂದು ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಶುಕ್ರವಾರ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.ಡಿಸಿಪಿ ದರ್ಜೆಯ ಅಧಿಕಾರಿಯ ಅನುಮತಿ ಇಲ್ಲದೆ ಸಬ್ ಇನ್‌ಸ್ಪೆಕ್ಟರ್ ದರ್ಜೆಯ ಕಿರಿಯ ಪೊಲೀಸ್ ಅಧಿಕಾರಿ ಬಂಧಿಸಬಾರದೆಂಬ ನಿಬಂಧನೆ ಅಳವಡಿಸುವ ಕುರಿತು ಚಿಂತನೆ ನಡೆದಿದೆ ಎಂದರು.ಶಿವಸೇನಾ ಮುಖ್ಯಸ್ಥರಾಗಿದ್ದ ಬಾಳ ಠಾಕ್ರೆ ಅವರ ಅಂತ್ಯಸಂಸ್ಕಾರದ ದಿನ ಮುಂಬೈನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದನ್ನು ಫೇಸ್‌ಬುಕ್‌ನಲ್ಲಿ ಖಂಡಿಸಿದ್ದ ಇಬ್ಬರು ಯುವತಿಯರನ್ನು ಬಂಧಿಸಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಸರ್ಕಾರವು ಸಲಹಾ ಪತ್ರ ಬರೆಯುವ ನಿರ್ಧಾರಕ್ಕೆ ಬಂದಿದೆ.ಇ-ಮೇಲ್ ಸಂದೇಶದ ಮೂಲಕ ಅವಹೇಳನಕಾರಿ/ ಅಪಾಯಕಾರಿ ಅಥವಾ ಬೆದರಿಕೆ ರವಾನಿಸುವವರಿಗೆ ಮೂರು ವರ್ಷಗಳ ಕಾಲ ಸೆರೆವಾಸ ವಿಧಿಸಲು ಕಾಯಿದೆಯ 66ನೇ ಕಲಂ ಅವಕಾಶ ನೀಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry