ಕೇಂದ್ರದ ಕ್ರಮ ಅವೈಜ್ಞಾನಿಕ

ಗುರುವಾರ , ಜೂಲೈ 18, 2019
24 °C

ಕೇಂದ್ರದ ಕ್ರಮ ಅವೈಜ್ಞಾನಿಕ

Published:
Updated:

ಹರಿಹರ: `ಬತ್ತದ ಬೆಂಬಲ ಬೆಲೆಯನ್ನು ರೂ 80 ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಅವೈಜ್ಞಾನಿಕ~ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ವಿ. ಪಟೇಲ್ ಅಭಿಪ್ರಾಯಪಟ್ಟರು.ನಗರದ ಎಪಿಎಂಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರೈತ ಸಂಘ ಹಾಗೂ ಹಸಿರು ಸೇನೆ ಸಭೆಯಲ್ಲಿ ಅವರು ಮಾತನಾಡಿದರು.ಪ್ರಸ್ತುತ ಕೇಂದ್ರ ಸರ್ಕಾರ ಬತ್ತಕ್ಕೆ ್ಙ 1,030 ಬೆಂಬಲ ಬೆಲೆ ನೀಡುತ್ತಿದ್ದು. ಇತ್ತೀಚೆಗೆ ಕ್ವಿಂಟಲ್ ಬತ್ತಕ್ಕೆ ್ಙ 80ಹೆಚ್ಚಳ ಮಾಡಿರುವುದು ಅತ್ಯಂತ ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ಇದೂವರೆಗೂ ಬತ್ತಕ್ಕೆ ್ಙ 100 ಬೆಂಬಲ ಬೆಲೆ ನೀಡುತ್ತಿದೆ. ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಶಾಸಕ, ಮಂತ್ರಿಗಳ ಹಾಗೂ ವಿಪಕ್ಷ ನಾಯಕರ ವೇತನ ಹಾಗೂ ಭತ್ಯಗಳನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಆದರೆ, ರೈತರು ಬೆಳೆದ ಬತ್ತಕ್ಕೆ ಹೆಚ್ಚುವರಿ ಬೆಂಬಲ ಬೆಲೆಯನ್ನು ಘೋಷಣೆ ಮಾಡುವಲ್ಲಿ ವಿಫಲಗೊಂಡಿದೆ. ಇದು ರಾಜಕೀಯದ ಸ್ವಾರ್ಥತನದ ಪರಮಾವಧಿ ಎಂದು ಲೇವಡಿ ಮಾಡಿದರು.ರೈತರು ಬತ್ತಕ್ಕೆ ್ಙ 1,500 ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದ್ದರು. ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಂಬಲ ಬೆಲೆ ಸೇರಿ ್ಙ 1,210 ಆಗುತ್ತದೆ. ಬಾಕಿ ಉಳಿದ ್ಙ 290 ನೀಡುವವರು ಯಾರು? ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳದೇ ಇದ್ದರೆ `ಜೈಲ್ ಭರೋ~ ಚಳವಳಿ ಪ್ರಾರಂಭಿಸುವುದಾಗಿ ಎಚ್ಚರಿಕೆ ನೀಡಿದರು.ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಸಂಚಾಲಕ ಎಚ್. ಓಂಕಾರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರ್ ಅಂಜನಪ್ಪ, ಪ್ರಧಾನ ಕಾರ್ಯದರ್ಶಿ ಪ್ರಭುಗೌಡ, ಕರಿಬಸಮ್ಮ, ಬಸವರಾಜಪ್ಪ, ಶಂಬಣ್ಣ, ವೀರಭದ್ರಪ್ಪ, ಬಸಪ್ಪ ರೆಡ್ಡಿ, ದೊಗ್ಗಳ್ಳಿ ಸಿದ್ದಪ್ಪ, ಹುಲಿಗಿನಹೊಳೆ ಸುರೇಶ್, ನಂದಿಗಾವಿ ಸುರೇಶ್, ವೀರಭದ್ರಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry