ಭಾನುವಾರ, ಜನವರಿ 26, 2020
28 °C

ಕೇಂದ್ರೀಯ ಪಠ್ಯ ಕಠಿಣವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಕೇಂದ್ರೀಯ ಪಠ್ಯ ಕ್ರಮದ ಅಭ್ಯಾಸ ಕಠಿಣ ಎನ್ನುವ ಭಾವನೆ ಬಹುತೇಕ ಪೋಷಕರಲ್ಲಿದ್ದು, ಈ ಭಾವನೆ ತಪ್ಪು ತಿಳಿವಳಿಕೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು  ಜವಾಹರ್ ನವೋದಯ ಶಾಲೆಯ ಪ್ರಾಂಶುಪಾಲ ಗೋಪಾಲ್‌ಕೃಷ್ಣ ಹೇಳಿದರು.ನಗರದ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಇಂದು ಉದ್ಯೋಗಕ್ಕೆ ಮಾತ್ರ ಎಂಬಂತಾಗಿದೆ.

 

ಆದ್ದರಿಂದ ಅಂಕಗಳಿಕೆಗೂ ವಿದ್ಯಾರ್ಥಿಗಳು ಪ್ರಾಧಾನ್ಯತೆ ನೀಡಬೇಕು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದರ ಕಡೆಗೆ ಆದ್ಯತೆ ನೀಡಬೇಕು ಎಂದರು.  ಸಮಾರಂಭವನ್ನು  ನಿರೂಪಕ ಚಂದನ್ ಉದ್ಘಾಟಿಸಿದರು. ಎಂಎಸ್‌ವಿ ಪಬ್ಲಿಕ್ ಶಾಲೆ ಅಧ್ಯಕ್ಷ ಎ.ಸುಬ್ರಹ್ಮಣಿ, ಕಾರ್ಯದರ್ಶಿ ಮಂಜುಳಾ ಇತರರು  ಇದ್ದರು.   

ಪ್ರತಿಕ್ರಿಯಿಸಿ (+)