ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಶೇ 10 ಏರಿಕೆ

7

ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಶೇ 10 ಏರಿಕೆ

Published:
Updated:

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು ತನ್ನ ನೌಕರರು ಮತ್ತು  ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ 10ರಷ್ಟು ಹೆಚ್ಚಳ ಮಾಡಿದೆ. ಈ ಏರಿಕೆಯು ಜುಲೈ 1ರಿಂದ ಪೂರ್ವಾನ್ವಯವಾಗಲಿದೆ.ಸಾಲುಸಾಲು ಹಬ್ಬಗಳ ಅವಧಿ ಆರಂಭವಾಗುವ ಸಂದರ್ಭ­ದಲ್ಲೇ ಈ ಹೆಚ್ಚಳ­ವಾಗಿದೆ. ಇದರಿಂದ 50 ಲಕ್ಷ ನೌಕರರು ಮತ್ತು 30 ಲಕ್ಷ ಪಿಂಚಣಿದಾರರಿಗೆ ಅನುಕೂಲ­ವಾಗಲಿದೆ. ಪ್ರಸ್ತುತ ತುಟ್ಟಿಭ್ಯತೆಯು ಮೂಲವೇತನ ದರದ ಶೇ 80ರಷ್ಟು ಇದೆ. ಈಗ ಇದು ಶೇ 90ಕ್ಕೆ ಏರಲಿದೆ.ಈ ನಿರ್ಧಾರದಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಎಂಟು ತಿಂಗಳ ಅವಧಿಗೆ ಬೊಕ್ಕಸದ ಮೇಲೆ ರೂ 7,253.10 ಕೋಟಿ ಹೊರೆ ಬೀಳಲಿದೆ.

ಕೇಂದ್ರದ 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಈ ಹೆಚ್ಚಳವನ್ನು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಕೇಂದ್ರದ ತುಟ್ಟಿಭತ್ಯೆ ಇತ್ತೀಚಿನ ವರ್ಷಗಳಲ್ಲಿ ಹಲವು ಸಲ ಏರಿಕೆಯಾಗಿದ್ದರೂ, ಎರಡಂಕಿ ಪ್ರಮಾಣ ಏರಿಕೆಯಾಗುತ್ತಿರು ವುದು ಮೂರು ವರ್ಷಗಳ ನಂತರ ಇದೇ ಮೊದಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry