ಗುರುವಾರ , ಜೂನ್ 24, 2021
24 °C

ಕೇಂದ್ರ ಬಜೆಟ್ 2012-13 ಮುಖ್ಯಾಂಶಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಬಜೆಟ್ 2012-13 ಮುಖ್ಯಾಂಶಗಳು

* ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂನಿಂದ ಹಣ ಪಡೆಯಬಹುದಾಗಿದೆ.

* ಕೃಷಿ ಸಾಲದ ಮೊತ್ತ 1 ಲಕ್ಷ ಕೋಟಿ ಹೆಚ್ಚಳ, 5,75,000 ಕೋಟಿ ಸಾಲದ ಗುರಿ 4ಸಹಕಾರಿ ರಂಗಕ್ಕೆ 20,208 ಕೋಟಿ ನಿಗದಿ, ಶೇಕಡಾ 18ರಷ್ಟು ಅನುದಾನ ಹೆಚ್ಚಳ

* ಕೃಷಿ ಅನುದಾನ  600 ಕೋಟಿಯಿಂದ 1 ಸಾವಿರ ಕೋಟಿಗೆ ಹೆಚ್ಚಳ

* ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅನುದಾನ 9,217 ಕೋಟಿ ನಿಗದಿ

* ಇಸ್ರೊದ ಮಂಗಳನ ಯಾತ್ರೆ 125 ಕೋಟಿ ರೂಪಾಯಿ ಬಿಡುಗಡೆ

* ಇಸ್ರೋಗೆ 4432 ಕೋಟಿ ರೂಪಾಯಿ ಮೀಸಲು

* ಕಪ್ಪು ಹಣದ ಬಗ್ಗೆ ಶ್ವೇತಪತ್ರ

* ವಿದೇಶಗಳಲ್ಲಿ ಬಚ್ಚಿಟ್ಟ ಕಪ್ಪು ಹಣದ ಕುರಿತ ಮಾಹಿತಿ ಸಂಗ್ರಹ 

* ಕೆಲ ಪ್ರಕರಣಗಳಲ್ಲಿ ಕಾನೂನು ಕ್ರಮಕ್ಕೆ ಶೀಘ್ರ ಚಾಲನೆ

* ಮೆಟ್ರೊ ರೈಲು- ದೆಹಲಿಗೆ ಹೆಚ್ಚು (1,112.57 ಕೋಟಿ ರೂ)

* ಬೆಂಗಳೂರು ಮೆಟ್ರೊಗೆ 1670 ಕೋಟಿ

* ಚೆನ್ನೈ ಪಾಲಿಗೆ 990 ಕೋಟಿ ರೂ

* ಜೆನರ್ಮ್‌ಗೆ 88 ಕೋಟಿ ರೂ

* ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಎಲ್ಲ ಅಕಾಡೆಮಿ ಮತ್ತು ಸಂಸ್ಥೆಗಳ ಅನುದಾನ ಹೆಚ್ಚಳ

* ಸಂಗೀತ, ನಾಟಕ, ಲಲಿತಕಲಾ ಅಕಾಡೆಮಿ, ಸಾಹಿತ್ಯ ಅಕಾಡೆಮಿಗೆ 31 ಕೋಟಿ

* ಪ್ರತಿಷ್ಠಿತ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರಕ್ಕೆ 25 ಕೋಟಿ. ರಾಷ್ಟ್ರೀಯ ನಾಟಕ ಶಾಲೆಗೆ 23.50 ಕೋಟಿ ಅನುದಾನ

* ಕಡ್ಡಾಯ ಶಿಕ್ಷಣಕ್ಕೆ ಶೇಕಡಾ 21ರಷ್ಟು ಹೆಚ್ಚುವರಿ ಅನುದಾನ

* ಸರ್ವ ಶಿಕ್ಷ ಅಭಿಯಾನಕ್ಕೆ ರೂ 25, 555 ಕೋಟಿ. 19.2 ಕೋಟಿ ಮಕ್ಕಳಿಗೆ ಶಿಕ್ಷಣ

* ಬಿಸಿಯೂಟ ಯೋಜನೆಗೆ 11 ಸಾವಿರ ಕೋಟಿ

* ಅಂಗವಿಕಲರಿಗೆ ರೂ 300 ಮಾಸಾಶನ

* ವಿಧವಾ ವೇತನ ರೂ 300ಕ್ಕೆ ಹೆಚ್ಚಳ

* ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಗುರಿ

* ನಬಾರ್ಡ್‌ಗೆ 10 ಸಾವಿರ ಕೋಟಿ ನಿಗದಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.