ಭಾನುವಾರ, ಅಕ್ಟೋಬರ್ 20, 2019
22 °C

ಕೇಂದ್ರ ಲಲಿತ ಕಲಾ ಅಕಾಡೆಮಿಗೆ ಸುಬ್ಬಣ್ಣ ನೇಮಕ

Published:
Updated:

ನವದೆಹಲಿ: ಕೇಂದ್ರ ಲಲಿತ ಕಲಾ ಅಕಾಡೆಮಿ ಹಂಗಾಮಿ ಅಧ್ಯಕ್ಷರಾಗಿ ಗ್ರಾಫಿಕ್ ಕಲಾವಿದ ಕನ್ನಡಿಗ ಕೆ.ಆರ್. ಸುಬ್ಬಣ್ಣ ನೇಮಕ ಗೊಂಡಿದ್ದಾರೆ.ಅಕಾಡೆಮಿ ಅಧ್ಯಕ್ಷರಾಗಿದ್ದ ಅಶೋಕ್ ವಾಜಪೇಯಿ ಅವರ ನಿವೃತ್ತಿಯಿಂದ ತೆರ ವಾದ ಸ್ಥಾನಕ್ಕೆ ಸುಬ್ಬಣ್ಣ ನೇಮಕ ಗೊಂಡಿದ್ದಾರೆ. `ಕಲಾವಿದರ ಸಾಮಾನ್ಯ ಮಂಡಲಿ~ಯಿಂದ ಸುಬ್ಬಣ್ಣ ಅಕಾಡೆಮಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಅಕಾಡೆಮಿ ಸಂವಿಧಾನದ ಅನ್ವಯ ಅವರೀಗ ಹಂಗಾಮಿ ಅಧ್ಯಕ್ಷರು. ಕೇಂದ್ರ ಸರ್ಕಾರ ಹೊಸ ಅಧ್ಯಕ್ಷರನ್ನು ನೇಮಕ ಮಾಡುವವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.ಸದ್ಯ ದೆಹಲಿ ಕನ್ನಡ ಶಾಲೆಯಲ್ಲಿ ಕಲಾ ಶಿಕ್ಷಕರಾಗಿರುವ ಸುಬ್ಬಣ್ಣ ಮೂಲತಃ ಶಿವಮೊಗ್ಗ ಜಿಲ್ಲೆ ಕುಪ್ಪಗಡ್ಡೆ ಗ್ರಾಮ ದವರು. ದಾವಣಗೆರೆ ಸರ್ಕಾರಿ ಕಲಾ ಕಾಲೇಜಿನಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಅವರು, ಎರಡೂವರೆ ದಶಕದಿಂದ ದೆಹಲಿಯಲ್ಲಿ ನೆಲೆಸಿದ್ದಾರೆ.

Post Comments (+)