ಭಾನುವಾರ, ಮೇ 22, 2022
21 °C

ಕೇಂದ್ರ ವೈದ್ಯಕೀಯ ನೀತಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ವೈದ್ಯಕೀಯ ವಿರೋಧಿ ನೀತಿ ಖಂಡಿಸಿ ಸೋಮವಾರ ಚಿಕ್ಕಬಳ್ಳಾಪುರ ಜಿಲ್ಲೆ, ದೇವನಹಳ್ಳಿ ಮತ್ತು ವಿಜಯಪುರದ ವೈದ್ಯರು ನಗರದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರದ ಎನ್‌ಸಿಎಚ್‌ಆರ್‌ಎಚ್ ಬಿಲ್, ಕ್ಲಿನಿಕ್ ಸಂಸ್ಥಾಪನೆ ಕಾನೂನು ಮತ್ತು ಮೆಡಿಕಲ್ ಕೌನ್ಸಿಲ್ ರದ್ದುಪಡಿಸಿರುವುದನ್ನು ಖಂಡಿಸಿ ವೈದ್ಯರು ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆಯನ್ನು ಪ್ರಮುಖ ರಸ್ತೆಗಳಲ್ಲಿ ನಡೆಸಿದರು. ಕೇಂದ್ರ ಸರ್ಕಾರವು ವೈದ್ಯರನ್ನು ಕಡೆಗಣಿಸುತ್ತಿದೆ. ವೈದ್ಯರ ಹಕ್ಕುಗಳನ್ನು ಕಸಿಯುತ್ತಿದೆ ಎಂದು ಆಕ್ರೋಶದಿಂದ ಕೂಗುತ್ತಾ, ಶಿಡ್ಲಘಟ್ಟ ವೃತ್ತದಲ್ಲಿ ಮಾನವ ಸರಪಣಿ ರಚಿಸಿದರು.`ಕೇಂದ್ರ ಸರ್ಕಾರದ ಅಧೀನದಲ್ಲಿ ವೈದ್ಯರು ಕುಣಿಯಬೇಕು ಎಂಬ ನೀತಿಯನ್ನು ನಾವು ವಿರೋಧಿಸುತ್ತೇವೆ. ಇದರಿಂದ ಬಡವರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಸಿಗದಂತಾಗುತ್ತದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಪಿಯುಸಿ ಪಾಸಾದವರಿಗೆ ಮೂರು ವರ್ಷ ತರಬೇತಿ ನೀಡಿ ಹಳ್ಳಿಗಳಲ್ಲಿ ಅವರು ವೈದ್ಯಕೀಯ ಚಿಕಿತ್ಸೆ ನೀಡಲು ನಿಯೋಜಿಸುವ ಯೋಜನೆಯಿದೆ. ಇದೊಂದು ದುರದೃಷ್ಟಕರ ಸಂಗತಿ ಎಂದು ಅವರು ದೂರಿದರು.`ಗ್ರಾಮಸ್ಥರಿಗೆ ವೈದ್ಯರಲ್ಲದವರು ಚಿಕಿತ್ಸೆ ನೀಡುವಂತಾದರೆ ಹೇಗೆ ?, ಹಳ್ಳಿಗಳಲ್ಲಿರುವವರಿಗೆ ಸೂಕ್ತ ಸೌಲಭ್ಯ ಮತ್ತು ಸಂಬಳ ನೀಡಿ ವೈದ್ಯರನ್ನು ನಿಯೋಜಿಸಬೇಕು. ಅದು ಬಿಟ್ಟು ಅವೈಜ್ಞಾನಿಕ ನೀತಿಗಳನ್ನು ಬೀಡುವಂತೆ~  ಜಿಲ್ಲಾ ಐಎಂಎ ಕಾರ್ಯದರ್ಶಿ ಡಾ.ಪ್ರಶಾಂತ್ ಎಸ್.ಮೂರ್ತಿ ಅವರು ತಿಳಿಸಿದರು.ಪ್ರತಿಭಟಿಸಿದ ವೈದ್ಯರು ನಂತರ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ, ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾ ವೇಳೆ ಜಿಲ್ಲಾ ಐಎಂಎ ಅಧ್ಯಕ್ಷ ಡಾ.ಮಂಜುನಾಥ್, ಗೌರಿಬಿದನೂರು ತಾಲ್ಲೂಕು ಐಎಂಎ ಅಧ್ಯಕ್ಷ ಡಾ.ಶಶಿಧರ್, ಚಿಂತಾಮಣಿ ತಾಲ್ಲೂಕು ಐಎಂಎ ಅಧ್ಯಕ್ಷೆ ಡಾ.ಮಂಜುಳಾ, ಡಾ.ಸವಿತಾ, ಡಾ.ಕೆ.ಪಿ ಶ್ರೀನಿವಾಸಮೂರ್ತಿ ಮತ್ತಿತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.