ಕೇಂದ್ರ ಸರ್ಕಾರಕ್ಕೆ ಆಯನೂರು ಮನವಿ

7

ಕೇಂದ್ರ ಸರ್ಕಾರಕ್ಕೆ ಆಯನೂರು ಮನವಿ

Published:
Updated:

ನವದೆಹಲಿ: ಶಿವಮೊಗ್ಗ, ಬೀದರ್‌ ಹಾಗೂ  ಹಾಸನ ಪಶುವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದಿರುವ 99 ಮಂದಿಗೆ ವೃತ್ತಿ ಆರಂಭಿಸಲು ಅವಕಾಶ ನೀಡಬೇಕು ಸಂಸದ ಆಯನೂರು ಮಂಜುನಾಥ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ಅವರನ್ನು ಬುಧವಾರ ಭೇಟಿ ಮಾಡಿದ ಆಯನೂರು ಮಂಜುನಾಥ್‌ ಶಿವಮೊಗ್ಗ, ಬೀದರ್‌, ಹಾಸನ ಪಶುವೈದ್ಯ ಕಾಲೇಜುಗಳಿಂದ ಪದವಿ ಪಡೆದವರು ಎದುರಿಸು ತ್ತಿರುವ ಸಮಸ್ಯೆಯನ್ನು ವಿವರಿಸಿದರು.ಭಾರತೀಯ ಪಶುವೈದ್ಯಕೀಯ ಮಂಡಳಿ ಕೂಡಲೇ ಮಧ್ಯಪ್ರವೇಶಿಸಿ, ಪದವೀಧರರಿಗೆ ಹೆಸರು ನೋಂದಾ ಯಿಸಿ ಕೊಂಡು ವೃತ್ತಿ ಆರಂಭಿಸಲು ಅನುಮತಿ ನೀಡಬೇಕು. ಅವರು ಪಡೆ ದಿರುವ ಪದವಿ ಯನ್ನು ಮಾನ್ಯಮಾ ಡಬೇಕು ಎಂದು ಆಗ್ರಹಿಸಿದರು.ಈಗಾಗಲೇ ದೊರೆತಿರುವ ತಾತ್ಕಾಲಿಕ ಮಾನ್ಯತೆ ಕಾಯಂ ಆಗುವ ತನಕ ವೃತ್ತಿ ಆರಂಭಿಸಲು ತಾತ್ಕಾಲಿಕ ನೋಂದಣಿ ನೀಡ ಬೇಕೆಂದು ಕೋರಿದರು. ಸಂಸದರ ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಪವಾರ್‌ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry