ಕೇಂದ್ರ ಸರ್ಕಾರದ ನೀತಿ ಖಂಡಿಸಿ ಪ್ರತಿಭಟನೆ

ಭಾನುವಾರ, ಮೇ 26, 2019
31 °C

ಕೇಂದ್ರ ಸರ್ಕಾರದ ನೀತಿ ಖಂಡಿಸಿ ಪ್ರತಿಭಟನೆ

Published:
Updated:

ದಾವಣಗೆರೆ: ಕೇಂದ್ರದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸತತವಾಗಿ 9 ಬಾರಿ ಪೆಟ್ರೋಲ್ ಮತ್ತು ಡೀಸಲ್ ದರವನ್ನು ಹೆಚ್ಚಿಸಿ ಜನಸಮಾನ್ಯರ ಜೀವನ ದುಸ್ತರವಾಗುವಂತೆ ಮಾಡಿದೆ. ಈ ಜನವಿರೋಧಿ ನೀತಿ ಖಂಡಿಸಿ ಸೆ. 17ರಂದು ಜಿಲ್ಲಾ ಜನತಾದಳದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್ ವಕ್ತಾರ ಗೋಣಿವಾಡ ಮಂಜುನಾಥ ತಿಳಿಸಿದರು.ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಸರ್ಕಾರ ಇಂಧನ ದರ ಹೆಚ್ಚಿಸುವುದರಿಂದ ಪ್ರಯಾಣ ದರ ಹೆಚ್ಚಾಗುತ್ತದೆ. ಅಗತ್ಯ ವಸ್ತುಗಳ ದುಬಾರಿಯಾಗುತ್ತವೆ ಇದರಿಂದ ಜನರಿಗೆ ಕಷ್ಟವಾಗುತ್ತದೆ.ಆದ್ದರಿಂದ, ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಬದಲಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್‌ನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.ಹೊವಿನಮಡು ಚಂದ್ರಪ್ಪ, ಎಸ್. ಸಂಗನಗೌಡ, ಬಿ. ದಾದಾಪೀರ್ ಟಿ. ಹನುಮಂತಪ್ಪ, ಬಾತಿ ಶಂಕರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry