ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಗುರುವಾರ , ಜೂಲೈ 18, 2019
22 °C

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

Published:
Updated:

ಹಿರಿಯೂರು: ಕಪ್ಪು ಹಣ ವಶಪಡಿಸಿಕೊಂಡು, ಅದನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಸತ್ಯಾಗ್ರಹ ಆರಂಭಿಸಿದ್ದ ಬಾಬಾ ರಾಮದೇವ್ ಮೇಲೆ ಕೇಂದ್ರ ಸರ್ಕಾರ ಪೊಲೀಸರ ಮೂಲಕ ನಡೆಸಿರುವ ದೌರ್ಜನ್ಯ ಖಂಡನೀಯ ಎಂದು ಬಿಜೆಪಿ ಮುಖಂಡ ವೈ.ಎಸ್. ಅಶ್ವತ್ಥಕುಮಾರ್ ಹೇಳಿದರು.ನಗರದಲ್ಲಿ ಸೋಮವಾರ ರಾಮದೇವ್ ಬಂಧನ ಹಾಗೂ ಸತ್ಯಾಗ್ರಹಿಗಳ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯ ಖಂಡಿಸಿ ತಾಲ್ಲೂಕು ಬಿಜೆಪಿ ಹಾಗೂ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಅವರುಮಾತನಾಡಿದರು.ದೌರ್ಜನ್ಯದಿಂದ ಸತ್ಯಕ್ಕಾಗಿ ಹೋರಾಟ ನಡೆಸುವವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಯುಪಿಎ ಅಧ್ಯಕ್ಷೆಗೆ, ಪ್ರಧಾನಿಗೆ ದೇಶದ ಬಗ್ಗೆ ಕಾಳಜಿ ಇದ್ದರೆ, ಅವರಲ್ಲಿ ಪ್ರಾಮಾಣಿಕತೆ ಇದ್ದರೆ, ಸತ್ಯಾಗ್ರಹಿಗಳನ್ನು ದಮನ ಮಾಡುವ ಬದಲು, ಅವರು ಇಟ್ಟಿರುವ ಬೇಡಿಕೆ ಈಡೇರಿಸಲಿ ಎಂದು ಮಾಜಿ ಶಾಸಕ ಆರ್. ರಾಮಯ್ಯ ಒತ್ತಾಯ ಮಾಡಿದರು.ಎಂ.ಎಸ್. ರಾಘವೇಂದ್ರ, ಎಚ್.ಎಸ್. ಸುಂದರರಾಜ್, ಜೆ. ರಾಮಯ್ಯ, ಎಂ.ಡಿ. ಕಾಂತರಾಜ್,  ಶ್ರೀನಿವಾಸ್, ರವೀಂದ್ರನಾಥ್,ಎಚ್.ಬಿ. ಮಾನಾಚಾರ್, ಪಿ.ಎಸ್. ತಿಮ್ಮರಾಜಯಾದವ್, ಕೇಶವ ಮೂರ್ತಿ, ಬಿ.ಕೆ. ತಿಪ್ಪೇಸ್ವಾಮಿ, ಎಚ್. ಲೋಕೇಶ್, ಎಂ.ಕೆ. ಗಜೇಂದ್ರಶರ್ಮ, ಬಿ.ಆರ್. ರಂಗಸ್ವಾಮಿ, ಮಂಜುನಾಥ್, ನೀಲಕಂಠಪ್ಪ, ದಾಕ್ಷಾಯಿಣಿ, ಆಲೂರು ಕಾಂತರಾಜ್, ಎಂ.ಡಿ. ಗೌಡ್ರು, ದೇವರಾಜಮೂರ್ತಿ, ದೇವರಾಜ್, ಪರಮೇಶ್ವರಾಚಾರ್, ಸರವಣ, ಎಸ್. ಮಂಜುನಾಥ್, ಸಲೀಂ, ಎಳನೀರು ಸರವಣ, ಜಿ.ಪಿ. ನಾರಾಯಣ್, ಚಂದ್ರಶೇಖರ ಪಟೇಲ್, ಯರಬಳ್ಳಿ ರಾಜಣ್ಣ ಮತ್ತಿತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry