ಮಂಗಳವಾರ, ಏಪ್ರಿಲ್ 20, 2021
32 °C

ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ: ಎಲ್ಲ ರಂಗದಲ್ಲಿ ಹಿಂದೆ ಉಳಿದಿರುವ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಡಲು ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ ಶುಕ್ರವಾರ ಮಹತ್ವಪೂರ್ಣವಾದ ಐತಿಹಾಸಿಕ ನಿರ್ಣಯ ಕೈಗೊಂಡಿರುವುದಕ್ಕೆ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಸಂಸದ ಎ. ವೆಂಕಟೇಶ ನಾಯಕ ಅವರು ಅಭಿನಂದನೆ ಹೇಳಿದರು.ಶನಿವಾರ ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳು ಅಗತ್ಯ ಮೂಲ ಸೌಕರ್ಯ ಸೇರಿದಂತೆ ಉದ್ಯೋಗ, ಶಿಕ್ಷಣ ಮತ್ತು ನೇಮಕಾತಿಯಲ್ಲಿ ಇಂದಿಗೂ ತಾರತಮ್ಯ ನೀತಿ ಅನುಸಿರಿರುವುದರಿಂದ ಜನರ ತೊಂದರೆಗೆ ಕಾರಣವಾಗಿತು. ಕೇಂದ್ರ ಸರ್ಕಾರದದಲ್ಲಿ ರಾಜ್ಯದ ಸಚಿವರು ಅತಿ ಹೆಚ್ಚು ಶ್ರಮವಹಿಸಿ ಕಲಂ 371 ತಿದ್ದುಪಡೆಯನ್ನು ಅಧಿವೇಶನದಲ್ಲಿ ಮಂಡನೆಗೆ ಕಾರಣರಾಗಿದ್ದು, ಅವರಿಗೂ ಪಕ್ಷದ ವತಿಯಿಂದ ಅಭಿನಂದನೆ ಹೇಳಿದರು.ರಾಜ್ಯದಲ್ಲಿ ಅನೇಕ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರ ಬಂದಾಗಲೆಲ್ಲ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಾ ಬರಲಾಗಿತ್ತು. ಈ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಉಪ ಪ್ರಧಾನಿ ಲಾಲಕೃಷ್ಣ ಆಡ್ವಾನಿ ಅವರು ಕಲಂ 371 ತಿದ್ದುಪಡೆಯನ್ನು ತಿರಸ್ಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದರು.ಇದೇ 8ರಂದು ನಡೆಯಲಿರುವ ಸಂಸತ್ ಅಧಿವೇಶನದಲ್ಲಿ 371ನೇ ಕಲಂ ತಿದ್ದುಪಡೆ ಮಸೊದೆಯನ್ನು ಮಂಡಿಸುವ ಭರವಸೆ ನೀಡಿರುವುದು ಮತ್ತು ಬೇಗನೆ ಜಾರಿಗೆ ತರುವ ಬಗ್ಗೆ ಆಶಾಭಾವನೆ ಇದೆ ಎಂದರು.

ಹೈದರಾಬಾದ್ ಕರ್ನಾಟಕದ ಬಗ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಮತ್ತು ರಾಜ್ಯದ ಸಚಿವರು ವಿಶೇಷ ಆಸಕ್ತಿ ವಹಿಸಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ ಅವರು ಹೇಳಿದರು.ವಿಜಯೋತ್ಸವ: ಇದಕ್ಕೂ ಪೂರ್ವದಲ್ಲಿ ಮಾಜಿ ಸಂಸದ ಎ. ವೆಂಕಟೇಶ ನಾಯಕ ಅವರ ನೇತೃತ್ವದಲ್ಲಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬಸ್ಸಯ್ಯ ಸಾಕೆ, ಶಾಮಸುಂದರ ಅಬಕಾರಿ, ಡಾ. ಸುಭಾಸ ಪಾಟೀಲ, ಫಜಲುಲ್ ಸಾಜೀದ್, ಹುಸೇನಸಾಬ ನಿಲವಂಜಿ, ಇಕ್ಬಾಲ್‌ಸಾಬ, ಬಾಪೂಗೌಡ ಪಾಟೀಲ, ಗಂಗಪಯ್ಯ ಪೂಜಾರಿ, ಅಮೀನಭಾಷ, ಶೇಖ್ ಮುನ್ನಾಬಾಯಿ, ಲಕ್ಷ್ಮಣ ಜ್ಯೋತಿ, ಲಕ್ಷ್ಮಣ ಗೋಸಲ, ಪ್ರಭು ಗದ್ಗಿ, ಸಿ. ರಮೇಶ, ಇಮಾಮ ಅಲಿ ಹುಜರತಿ, ಟಿ. ನಾಗರಾಜ, ಫಾರುಖ್ ಆಹ್ಮದ್, ಮಹಾದೇವ ಪಾಟೀಲ, ವೆಂಕಟೇಶ ಸೋಮಕಾರ, ವೆಂಕಟರೆಡ್ಡಿ ಕಮತಿಗಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.