ಕೇಕ್ ಮಿಕ್ಸಿಂಗ್

7

ಕೇಕ್ ಮಿಕ್ಸಿಂಗ್

Published:
Updated:

ರೇಸ್‌ಕೋರ್ಸ್ ರಸ್ತೆಯಲ್ಲಿರುವ ಫಾರ್ಚೂನ್ ಪಾರ್ಕ್ ಜೆಪಿ ಸೆಲೆಸ್ಟಿಯಲ್ ಹೋಟೆಲ್‌ನಲ್ಲಿ ಈಚೆಗೆ ಕೇಕ್ ಮಿಕ್ಸಿಂಗ್  ಆಯೋಜಿಸಲಾಗಿತ್ತು.

ಶಾಲೋಂ ಗ್ರೇಸ್ ಅನಾಥಾಲಯದ 25 ಮಕ್ಕಳು ಕೇಕ್ ಮಿಕ್ಸಿಂಗ್ ಸಮಾರಂಭದಲ್ಲಿ ಭಾಗವಹಿಸಿದ್ದು ಈ ಸಮಾರಂಭದ ಇನ್ನೊಂದು ವಿಶೇಷ.ಅನಾಥಾಯಲದಿಂದ ಬಂದಿದ್ದ ಈ ಮಕ್ಕಳು ತಮ್ಮ ಪುಟ್ಟ ಪುಟ್ಟ ಕೈಗಳಲ್ಲಿ ಬೊಗಸೆ ತುಂಬಾ ಒಣದ್ರಾಕ್ಷಿ, ಗೋಡಂಬಿ, ಬಾದಾಮಿ ತುಣುಕುಗಳನ್ನು ಹಾಕಿ ಖುಷಿಪಟ್ಟರು. ಕೈಗೆ ಪ್ಲಾಸ್ಟಿಕ್‌ನಿಂದ ತಯಾರಿಸಿದ್ದ ಕೈಗವಸು ತೊಟ್ಟು ದೊಡ್ಡ ಬಾಣಲೆಗೆ ಕೈಹಾಕಿ ಕಲಸಿ ಸಂಪ್ರೀತರಾದರು.ಇದಕ್ಕೂ ಮೊದಲು ಹೋಟೆಲ್‌ನ ಮುಖ್ಯ ಬಾಣಸಿಗ ಶೋಭಿರಾಂ ಅವರು ಆಲ್ಮಂಡ್, ಚೆರ‌್ರಿ, ಜಟ್ಟಿ ಫ್ರೂಟ್ಸ್, ರಮ್, ಬಿಯರ್, ವೈನ್ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ಒಟ್ಟಿಗೆ ಸುರಿಯುವ ಮೂಲಕ ಕೇಕ್ ಮಿಕ್ಸಿಂಗ್‌ಗೆ ಚಾಲನೆ ನೀಡಿದರು. ಆನಂತರ ಮಕ್ಕಳು ಇದಕ್ಕೆ ಕೈ ಜೋಡಿಸಿದರು.ಈ ವೇಳೆ ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಪಂಥ್, ಬಾಣಸಿಗ ವಿಜಯ್ ಕುಮಾರ್ ಹಾಗೂ ಹೋಟೆಲ್‌ನ ಸಿಬ್ಬಂದಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry