ಗುರುವಾರ , ಏಪ್ರಿಲ್ 22, 2021
30 °C

ಕೇಜ್ರಿವಾಲ್ ತಂಡಕ್ಕೆಹಣ ನೀಡಿಲ್ಲ: ನಾರಾಯಣ ಮೂರ್ತಿ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ): `ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಅವರ ರಾಜಕೀಯ ಚಟುವಟಿಕೆಗಳಿಗೆ ನಾನು ದೇಣಿಗೆ ನೀಡಿಲ್ಲ~ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸ್ಪಷ್ಟಪಡಿಸಿದ್ದಾರೆ.ಸೋಮವಾರವಷ್ಟೇ ಟಾಟಾ ಸಾಮಾಜಿಕ ಕಲ್ಯಾಣ ಟ್ರಸ್ಟ್ ಸಂಸ್ಥೆ `ರಾಜಕೀಯ ಚಟುವಟಿಕೆಗಳಿಗಾಗಿ ಹಣ ನೀಡಿಲ್ಲ~ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಈಗ ಇನ್ಫೋಸಿಸ್ ಸಂಸ್ಥೆ ಕೂಡ ಅದೇ ರೀತಿ ಹೇಳಿಕೆ ನೀಡಿದೆ.ಪತ್ರಿಕಾ ಪ್ರಕಟಣೆಯಲ್ಲಿ  ಈ ವಿಷಯ ತಿಳಿಸಿರುವ ನಾರಾಯಣಮೂರ್ತಿಯವರು, `ಸೆಪ್ಟೆಂಬರ್ 2012ರಲ್ಲಿ ಕೇಜ್ರಿವಾಲ್ ಅವರು ನನ್ನಲ್ಲಿ ಧನ ಸಹಾಯ ಕೇಳಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೆ. ನಿಮ್ಮ ರಾಜಕೀಯ ಚಟುವಟಿಕೆಗಳಿಗೆ ಧನ ಸಹಾಯ ಮಾಡುವುದಿಲ್ಲ ಎಂದು ಹೇಳ್ದ್ದಿದೆ~ ಎಂದು ನಾರಾಯಣಮೂರ್ತಿ ತಿಳಿಸಿದ್ದಾರೆ. `2008ರಲ್ಲಿ ಕೇಜ್ರಿವಾಲ್ ಅವರು, ಆರ್‌ಟಿಐ ಕ್ಷೇತ್ರದಲ್ಲಿ  ಅಧಿಕಾರಿಗಳು, ಎನ್‌ಜಿಒ ಹಾಗೂ ಸಾರ್ವಜನಿಕರ ಪಾತ್ರ ಗುರುತಿಸಿ ಪ್ರಶಸ್ತಿ ನೀಡುವ ಸಲುವಾಗಿ ಆರ್ಥಿಕ ನೆರವು ನೀಡುವಂತೆ ನನ್ನಲ್ಲಿ ಮನವಿ ಮಾಡಿದ್ದರು.ಅದಕ್ಕೆ ಪ್ರತಿಯಾಗಿ ನಾನು, 2008-2009ರಲ್ಲಿ ರೂ 25 ಲಕ್ಷ , 2009-2010ನೇ ಸಾಲಿಗೆ ರೂ 37 ಲಕ್ಷ ಮತ್ತು 2011ನೇ ಸಾಲಿನಲ್ಲಿ ರೂ 25 ಲಕ್ಷ  ಹಣವನ್ನು ನೀಡಿದ್ದೆ. 2010ರ ಸಾಲಿನಲ್ಲಿ ಆರ್‌ಟಿಐ ಕಾರ್ಯಕರ್ತರ ಕುಟುಂಬದವರಿಗೆ (ಹೋರಾಟದಲ್ಲಿ ಮಡಿದವರ ಕುಟುಂಬಕ್ಕೆ) ಮತ್ತು ಪ್ರಶಸ್ತಿ ಸ್ವೀಕರಿಸಲು ಬರುವವರ ಪ್ರಯಾಣದ ವೆಚ್ಚಕ್ಕೆ ಹಣ ನೀಡಲು ಹೆಚ್ಚುವರಿ ಹಣದ ಅಗತ್ಯ ಇದ್ದುದರಿಂದ ಆ ವರ್ಷ ರೂ. 12 ಲಕ್ಷ ಹೆಚ್ಚುವರಿಯಾಗಿ ನೀಡಿದ್ದೆ~ ಎಂದು ಮೂರ್ತಿ ವಿವರಿಸಿದ್ದಾರೆ.`ಮೇ 2011ರಲ್ಲಿ ಕೇಜ್ರಿವಾಲ್ ಅವರು ನನಗೆ ಪತ್ರ ಬರೆದು, ಪ್ರಶಸ್ತಿ ನೀಡುವ ಪ್ರತಿಷ್ಠಾನ ಜನ ಲೋಕಪಾಲ್ ಮಸೂದೆಯ ಕರಡು ಪ್ರತಿ ತಯಾರಿಕೆಯಲ್ಲಿ ನಿರತವಾಗಿರುವ ಕಾರಣ ಈ ವರ್ಷ (2011) ಪ್ರಶಸ್ತಿಗಳನ್ನು ನೀಡಲಾಗುತ್ತಿಲ್ಲ. ನೀವು ಒಪ್ಪುವುದಾದರೆ ಪ್ರಶಸ್ತಿಗಾಗಿ ನೀಡಿರುವ 25 ಲಕ್ಷ ರೂಪಾಯಿಯನ್ನು ಜನ ಲೋಕಪಾಲ ಮಸೂದೆಯ  ಸಂಬಂಧದ ಖರ್ಚುವೆಚ್ಚಗಳಿಗಾಗಿ ಬಳಸಿಕೊಳ್ಳಬಹುದೇ ಎಂದು ಕೇಳಿದ್ದರು. ನಾನು ಅದಕ್ಕೆ ಒಪ್ಪಿಗೆ ನೀಡಿದ್ದೆ~ ಎಂದು ಮೂರ್ತಿಯವರು ವಿವರಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.