ಬುಧವಾರ, ಏಪ್ರಿಲ್ 21, 2021
30 °C

ಕೇಜ್ರಿವಾಲ್ ಪಕ್ಷದ ಯಶಸ್ಸು: ಹೆಗ್ಡೆ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಜ್ರಿವಾಲ್ ಪಕ್ಷದ ಯಶಸ್ಸು: ಹೆಗ್ಡೆ ಶಂಕೆ

ನವದೆಹಲಿ (ಪಿಟಿಐ): ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ ನಾಯಕ ಅರವಿಂದ್ ಕೇಜ್ರಿವಾಲ್ ಕಟ್ಟಿರುವ ಹೊಸ ರಾಜಕೀಯ ಪಕ್ಷದ ಯಶಸ್ಸಿನ ಬಗ್ಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಸತ್ತಿಗೆ 546 ಸದಸ್ಯರನ್ನು ಆಯ್ಕೆ ಮಾಡಲು ಅಪಾರ ಮೊತ್ತದ ಹಣ ಬೇಕಾಗುತ್ತದೆ. ಅದು ಸುಲಭವಲ್ಲ. ಇಂದಿನ ರಾಜಕೀಯ ವ್ಯವಸ್ಥೆಗೆ ಅಗತ್ಯವಿರುವ ಇಂತಹ ಅಂಶಗಳ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷದ ಉಳಿವಿನ ಬಗ್ಗೆ ಶಂಕೆ ಏಳುತ್ತದೆ ಎಂದು ಅವರು ಹೇಳಿದ್ದಾರೆ.

ಸೈದ್ಧಾಂತಿಕವಾಗಿ, ತಾತ್ವಿಕವಾಗಿ ಇದು ಒಳ್ಳೆಯದೇ. ಆದರೆ, ವಾಸ್ತವದಲ್ಲಿ ಇದು ಯಶಸ್ವಿಯಾಗಬಲ್ಲದೇ ಎಂದು ಹೆಗ್ಡೆ ಪ್ರಶ್ನಿಸಿದ್ದಾರೆ. ಕೇಜ್ರಿವಾಲ್ ಅವರ ಹೊಸ ಪಕ್ಷ ಹೇಗೆ ಕೆಲಸ ಮಾಡಬಲ್ಲದು ಎಂಬ ಪ್ರಶ್ನೆಗೆ ಹೆಗ್ಡೆ ಉತ್ತರಿಸುತ್ತಿದ್ದರು.

ಪ್ರಧಾನಿ ಸಹ ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿ. ಜತೆಗೆ ನ್ಯಾಯಾಂಗದ ಉನ್ನತ ವ್ಯಕ್ತಿಗಳನ್ನೂ ಲೋಕಪಾಲ ಮಸೂದೆ ವ್ಯಾಪ್ತಿಗೆ ತರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದೂ ಹೆಗ್ಡೆ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.