ಭಾನುವಾರ, ಮೇ 9, 2021
26 °C

ಕೇಜ್ರಿವಾಲ್ ವಿರುದ್ಧ ಮಾನನಷ್ಟ ಖಟ್ಲೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಲೋಕಪಾಲ ಮಸೂದೆಗಾಗಿ ಹೋರಾಡುತ್ತಿರುವ ಅಣ್ಣಾ ತಂಡದ ವಿರುದ್ಧ ಸಂಸತ್ ಪ್ರತಿನಿಧಿಗಳ ಸಮರ ಮುಂದುವರಿದಿದ್ದು, ಕಾಂಗ್ರೆಸ್ ಸಂಸದೆ ಜಗದಾಂಬಿಕಾ ಪಾಲ್ ಅವರು ಅರವಿಂದ್ ಕೇಜ್ರಿವಾಲ್ ಅವರಿಗೆ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.

ಇದೇ ವೇಳೆ ಕೇಂದ್ರದ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವ ವೀರಭದ್ರ ಸಿಂಗ್ ಅವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತಿಸುತ್ತಿರುವುದಾಗಿ ತಿಳಿಸಿದ್ದಾರೆ.

ಭ್ರಷ್ಟಾಚಾರದ ಆರೋಪದಡಿ 14 ಕೇಂದ್ರ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಲು ಅಣ್ಣಾ ತಂಡ ಒತ್ತಾಯಿಸುತ್ತಿದ್ದು, ಅವರಲ್ಲಿ ವೀರಭದ್ರ ಸಿಂಗ್ ಅವರೂ ಒಬ್ಬರಾಗಿದ್ದಾರೆ.

ಈ ಮುನ್ನ ಸಿಂಗ್ ಅವರು ಕೇಜ್ರಿವಾಲ್ ಅವರಿಗೆ ಪತ್ರ ಬರೆದು, ತಮ್ಮ ವಿರುದ್ಧ ಮಾಡಿರುವ ಆಧಾರರಹಿತ ಆರೋಪಗಳಿಗಾಗಿ ಬೇಷರತ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದರು.

ಮಾರ್ಚ್ 25ರಂದು ಇಲ್ಲಿನ ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕೇಜ್ರಿವಾಲ್ ಮಾಡಿದ್ದ ಭಾಷಣವನ್ನು ಆಕ್ಷೇಪಿಸಿ ಜಗದಾಂಬಿಕಾ ಪಾಲ್ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ. ಈ ಮುನ್ನ ಆರ್‌ಜೆಡಿ ರಾಜ್ಯಸಭಾ ಸದಸ್ಯರಾದ  ರಾಮ್‌ಕೃಪಾಲ್ ಯಾದವ್ ಮತ್ತು ರಾಜನೀತಿ ಪ್ರಸಾದ್ ಅವರು ಇದೇ ಭಾಷಣ ಆಕ್ಷೇಪಿಸಿ ಕೇಜ್ರಿವಾಲ್‌ಗೆ ಹಕ್ಕುಚ್ಯುತಿ ನೋಟಿಸ್ ನೀಡಿದ್ದರು.

`ನಮ್ಮದು ಕ್ರಿಮಿನಲ್‌ಗಳಿಂದ ತುಂಬಿರುವ ಸಂಸತ್ ಆಗಿದೆ. ಸಂಸತ್ತಿನಲ್ಲಿ 162 ಸಂಸದರ ವಿರುದ್ಧ ಕ್ರಿಮಿನಲ್ ದೂರುಗಳಿವೆ~ ಎಂದು ಕೇಜ್ರಿವಾಲ್ ಹೇಳಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.