ಗುರುವಾರ , ಮೇ 13, 2021
36 °C

ಕೇದಾರನಾಥ: ಭಾರಿ ಮಳೆ, ಇನ್ನೈದು ಶವ ಪತ್ತೆ, 50 ಮಂದಿ ಕಣ್ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಪಿಟಿಐ): ಹಿಮಾಲಯ ತಪ್ಪಲಿನ ಯಾತ್ರಾಸ್ಥಳ ಕೇದಾರನಾಥದಲ್ಲಿ ಭಾರಿ ಮಳೆಗೆ ಬಲಿಯಾದ ಇನ್ನೂ ಐವರ ಶವಗಳು ಸೋಮವಾರ ಪತ್ತೆಯಾಗಿದ್ದು ಇದರೊಂದಿಗೆ ಉತ್ತರಾಖಂಡದಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿದೆ. ಭೂಕುಸಿತಗಳ ಪರಿಣಾಮವಾಗಿ ಚರಧಾಮಯಾತ್ರೆ ಎರಡನೇ ದಿನವೂ ರದ್ದಾಗಿದೆ.ಭಾರಿ ಮಳೆ ಹಾಗೂ ಭೂಕುಸಿತಗಳ ಪರಿಣಾಮವಾಗಿ ವಿವಿಧ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಚಮೋಲಿ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದ್ದು ಐವರ ಶವಗಳು ಕೇದಾರನಾಥ ಸಮೀಪದ ಬಸುಕಿತಲ್ ನಲ್ಲಿ ಪತ್ತೆಯಾದವು ಎಂದು ಅವರು ಹೇಳಿದ್ದಾರೆ.ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥಕ್ಕೆ ಹೋಗುವ ವಾಹನ ಮಾರ್ಗಗಳು ಹಾಗೂ ಪಾದಚಾರಿ ಮಾರ್ಗಳು ಹಲವಾರು ಕಡೆಗಳಲ್ಲಿ ಭೂ ಕುಸಿತ, ಮನೆ ಕುಸಿತಗಳ ಅವಶೇಷಗಳಿಂದಾಗಿ ಬಂದ್ ಆಗಿವೆ. ಕಳೆದ 36 ಗಂಟೆಗಳಿಂದ ಈ ಪ್ರದೇಶಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ.ಅವಿರತ ಮಳೆಯಿಂದಾಗಿ ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳಲ್ಲಿ ಹಠಾತ್ ಪ್ರವಾಹಗಳು ಬಂದಿದ್ದು ಹಲವಾರು ಸೇತುವೆಗಳು, ರಸ್ತೆಗಳು, ಕಟ್ಟಡಗಳು ಕೊಚ್ಚಿ ಹೋಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.