ಕೇರಳಂನಲ್ಲಿ ಓಣಂ ಸದ್ಯ

ಮಂಗಳವಾರ, ಮೇ 21, 2019
31 °C

ಕೇರಳಂನಲ್ಲಿ ಓಣಂ ಸದ್ಯ

Published:
Updated:

ಕೇರಳ ತಿನಿಸುಗಳ ಅಪ್ಪಟ ರುಚಿಯನ್ನು ಬೆಂಗಳೂರಿಗರಿಗೆ ಪರಿಚಯಿಸಿದ್ದು `ಎಂದೆ ಕೇರಳಂ~ ರೆಸ್ಟೊರೆಂಟ್. ಕೇರಳದ ಸುಗ್ಗಿ ಹಬ್ಬ ಎನಿಸಿಕೊಂಡಿರುವ ಓಣಂ ಅಂಗವಾಗಿ ಈಗ ಕೇರಳ ಸದ್ಯಂ (ಅಲ್ಲಿನ ಸಾಂಪ್ರದಾಯಿಕ ಹಬ್ಬದ ಖಾದ್ಯ) ಉಣ ಬಡಿಸುತ್ತಿದೆ. ಅದಕ್ಕಾಗಿ ಸೆ.11ರ ವರೆಗೂ ಓಣಂ ಆಹಾರ ಉತ್ಸವ ನಡೆಸುತ್ತಿದೆ.ಕೇರಳ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದೆ. ಅದರ ಸಹಜ ಚೆಲುವನ್ನು ಇಮ್ಮಡಿಗೊಳಿಸಿರುವುದು ಇಲ್ಲಿನ ಆಹಾರ ವೈವಿಧ್ಯ ಕೂಡ. ರುಚಿ ರುಚಿಯಾದ ಸಸ್ಯಾಹಾರ ಹಾಗೂ ಮಾಂಸಾಹಾರ ತಿನಿಸುಗಳು ಭಕ್ಷ್ಯಪ್ರಿಯರ ಹೃದಯ ಗೆದ್ದಿವೆ.ಓಣಂ ಹಬ್ಬಕ್ಕೆಂದೇ ವಿಶಿಷ್ಟವಾಗಿ ತಯಾರು ಮಾಡುವ ಅಡುಗೆಯೇ `ಓಣಂ ಸದ್ಯ~. ಇದು ಹಲವು ವಿಶಿಷ್ಟ ಹಾಗೂ ಸ್ವಾದಿಷ್ಟ ತಿನಿಸುಗಳನ್ನು ಒಳಗೊಂಡಿರುವ ಊಟ. ಓಣಂ ಹಬ್ಬದ ವಿಶೇಷ ತಿನಿಸುಗಳನ್ನು ಬೆಂಗಳೂರಿಗರಿಗೂ ಉಣ ಬಡಿಸಬೇಕು ಎಂಬ ಆಶಯದಿಂದ ಎಂಟೆ ಕೇರಳಂ ಖ್ಯಾತ ಬಾಣಸಿಗ ತಿರುಮೇನಿ ಉನ್ನಿಕೃಷ್ಣನ್ ನಂಬೂದಿರಿ ಅವರನ್ನು ಕರೆಯಿಸಿದೆ.ಕಾಳನ್, ಪಾಯಸ, ಚಿಪ್ಸ್, ಓಲನ್, ತೋರನ್, ಎರುಶೇರಿ, ಅವಿಯಲ್ ಮೊದಲಾದ ಕೇರಳ ಖಾದ್ಯವನ್ನು ಬಯಸುವ ಆಹಾರ ಪ್ರಿಯರು ಎಂಟೆ ಕೇರಳಂಗೆ ಭೇಟಿ ನೀಡಬಹುದು. ಮಧ್ಯಾಹ್ನ ಊಟಕ್ಕೆ ಮಾತ್ರ ಓಣಂನ ಈ ವಿಶೇಷ ಊಟ ಲಭ್ಯ. ಸ್ಥಳ: ಎಂದೆ ಕೇರಳಂ, ನಂ.1, (ಹಳೇ ನಂ.12), ಹಲಸೂರು ರಸ್ತೆ.     

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry