ಕೇರಳದಲ್ಲಿ ಬೆಂಗಳೂರಿನ ತರುಣಿಯ ಆತ್ಮಹತ್ಯೆ

7

ಕೇರಳದಲ್ಲಿ ಬೆಂಗಳೂರಿನ ತರುಣಿಯ ಆತ್ಮಹತ್ಯೆ

Published:
Updated:

ಆರೂರು, ಕೇರಳ (ಪಿಟಿಐ):  ಕ್ರೈಸ್ತ ಸನ್ಯಾಸಿನಿಯಾಗುವ ಕನಸು ಹೊಂದಿದ್ದ ಬೆಂಗಳೂರಿನ ಹದಿನಾರರ ಹರೆಯದ ತರುಣಿಯೊಬ್ಬಳು ಸೋಮವಾರ ರಾತ್ರಿ ಇಲ್ಲಿ ನೇಣು ಹಾಕಿಕೊಂಡಿದ್ದಾಳೆ.ಕಳೆದ ಒಂದೂವರೆ ವರ್ಷದಿಂದ ಇಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಾ, ಸನ್ಯಾಸಿನಿಯಾಗುವ ನಿಟ್ಟಿನ ತರಬೇತಿಯನ್ನೂ ಪಡೆಯುತ್ತಿದ್ದ ಮರಿಯಾ ರೋಸಿ ಲಿನ್ ಅವರ ಆತ್ಮಹತ್ಯೆಗೆ ಖಿನ್ನತೆಯೇ ಕಾರಣ ಎನ್ನಲಾಗಿದೆ.ಮೂರು ದಿನಗಳ ಹಿಂದಷ್ಟೇ ಈಕೆಯ ತಂದೆ ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.ಈ ಸುದ್ದಿ ಗೊತ್ತಾದ ನಂತರ ಆಕೆ ತೀವ್ರ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆಗೆ ಶರಣಾಗಿರಬಹುದೆಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry