ಗುರುವಾರ , ಮೇ 13, 2021
16 °C

ಕೇರಳದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ರೂ 53 ಕೋಟಿ ಆಸ್ತಿ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಐಎಎನ್‌ಎಸ್): ಜೂನ್ ಒಂದರಿಂದ ಆರಂಭವಾದ ಮುಂಗಾರು ಮಳೆ ಕೇರಳದಾದ್ಯಂತ ವಾಡಿಕೆಗಿಂತ ಹೆಚ್ಚಾಗಿದ್ದರಿಂದ ಇದುವರೆಗೆ 23 ಜನರು ಸತ್ತಿದ್ದಾರೆ. 374 ಹಳ್ಳಿಗಳಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದೆ.ಮಳೆಯಿಂದ 53 ಕೋಟಿಗಿಂತಲೂ ಹೆಚ್ಚಾಗಿ ನಷ್ಟ ಉಂಟಾಗಿದ್ದು, ವೈನಾಡ್‌ನಲ್ಲಿ 20 ಕೋಟಿ ಕೃಷಿ ಉತ್ಪನ್ನಗಳಿಗೆ ಹಾನಿಯಾಗಿದೆ ಎಂದು ಪ್ರಾಥಮಿಕ ಸಮೀಕ್ಷೆಯಿಂದ ಗೊತ್ತಾಗಿದೆ.ಶುಕ್ರವಾರ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು, ಮಳೆಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ನಗದು ಪರಿಹಾರ ವಿತರಿಸುವಂತೆ ಆದೇಶಿಸಿದರು.ಮಳೆಯಿಂದ ಮನೆ ಕಳೆದುಕೊಂಡು ತಾತ್ಕಾಲಿಕ ಶಿಬಿರಗಳಲ್ಲಿ ಇರುವವರಿಗೆ ಉಚಿತ ಪಡಿತರ, ಎರಡು ಸಾವಿರ ರೂಪಾಯಿ ನಗದು, ಆಹಾರ ಮತ್ತು ಔಷಧಿಗಳನ್ನು ವಿತರಿಸಲು ಸೂಚಿಸಲಾಗಿದೆ ಎಂದು ಚಾಂಡಿ ತಿಳಿಸಿದ್ದಾರೆ.ಕರಾವಳಿ ಪ್ರದೇಶದ ಬುಡಕಟ್ಟು ಜನರು ಮತ್ತು ತೆಂಗಿನ ನಾರು ಉದ್ಯಮದ ಕಾರ್ಮಿಕರಿಗೆ ಉಚಿತ ಪಡಿತರ ವಿತರಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಮಳೆಯಿಂದ ಹಾನಿಗೊಳಗಾದ 374 ಹಳ್ಳಿಗಳ ಪೈಕಿ 71 ಹಳ್ಳಿಗಳು ಕರಾವಳಿ ತೀರದಲ್ಲಿ ಇವೆ. ಹತ್ತಿರದಲ್ಲೇ 50 ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಿ ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.