ಕೇರಳ ಮಾಜಿ ರಾಜ್ಯಪಾಲ ನಿಧನ

7

ಕೇರಳ ಮಾಜಿ ರಾಜ್ಯಪಾಲ ನಿಧನ

Published:
Updated:

ಚಂಡೀಗಡ(ಐಎಎನ್‌ಎಸ್):  ಅನಾರೋಗ್ಯದಿಂದ ಬಳಲುತ್ತಿದ್ದ ಕೇರಳದ ಮಾಜಿ ರಾಜ್ಯಪಾಲ  ಸುಖದೇವ್ ಸಿಂಗ್ ಕಾಂಗ (81) ಅವರು ಶುಕ್ರವಾರ ನಿಧನರಾದರು. ಅವರನ್ನು ಇಲ್ಲಿನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

 

1997ರಿಂದ 2002ರವರೆಗೆ ಕೇರಳ ರಾಜ್ಯಪಾಲರಾಗಿದ್ದ ಅವರು, ಅದಕ್ಕೂ ಮುನ್ನ ಜಮ್ಮು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು.  ರಾಷ್ಟ್ರೀಯ ಮಾನವಹಕ್ಕು ಆಯೋಗದ ಸದಸ್ಯರೂ ಆಗಿದ್ದರು.  ಅಂತ್ಯಕ್ರಿಯೆಯನ್ನು ಸಂಜೆ ಇಲ್ಲಿನ ಚಿತಾಗಾರದಲ್ಲಿ ನೆರವೇರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry