ಬುಧವಾರ, ನವೆಂಬರ್ 13, 2019
21 °C

ಕೇರಳ: ಸಂಭ್ರಮದ `ವಿಷು' ಆಚರಣೆ

Published:
Updated:

ತಿರುವನಂತಪುರ (ಪಿಟಿಐ):ಕೇರಳ ರಾಜ್ಯದಾದ್ಯಂತ ಜನರು ಭಾನುವಾರ ಸಂಭ್ರಮ, ಸಡಗರದಿಂದ ಸೌರಮಾನ ಯುಗಾದಿಯಾದ `ವಿಷು' ಹಬ್ಬ ಆಚರಿಸಿದರು.ಹೊಸ ವರ್ಷದ ಹೊಸ್ತಿಲಿನಲ್ಲಿ, ಹೊಸ ಫಸಲುಗಳನ್ನು ಪೂಜಿಸಿ ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಮುಂಜಾನೆ ಬೇಗ ಎದ್ದು, ಹಬ್ಬದ ಪ್ರಮುಖ ಆಕರ್ಷಣೆಯಾದ `ವಿಷುಕಣಿ' (ದವಸ-ಧಾನ್ಯ, ಫಲಗಳು, ತರಕಾರಿ, ಪುಷ್ಪಗಳು, ಚಿನ್ನ, ಬೆಳ್ಳಿಗಳನ್ನು ದೇವರ ಮುಂದೆ ಇಡುವುದು) ವೀಕ್ಷಿಸಿದ ಭಕ್ತರು ಗುರುಹಿರಿಯರ ಆಶೀರ್ವಾದ ಪಡೆದರು.

ಪ್ರತಿಕ್ರಿಯಿಸಿ (+)