ಕೇಳದಾಗಿದೆ ರೋಗಿಗಳ ಗೋಳು

ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನಾಲ್ವರು ವೈದ್ಯರನ್ನು ಏಕಕಾಲದಲ್ಲಿ ವರ್ಗಾವಣೆ ಮಾಡಿದ್ದು, ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ನರಳುವಂತಾಗಿದೆ.
7 ವರ್ಷಗಳಿಂದ ಸೇವೆ ಸಲ್ಲಿಸಿ ಅಪಾರ ಜನಮನ್ನಣೆಗಳಿಸಿದ್ದ ಡಾ. ವೆಂಕಟೇಶ್ ಸೇರಿದಂತೆ, ಮೂಳೆ ತಜ್ಞ ಡಾ.ಎಂ.ಕೆ. ಹರೀಶ್, ಕಿವಿಮೂಗು ಗಂಟಲು ತಜ್ಞ ಡಾ.ಸತ್ಯನಾರಾಯಣ, ಸರ್ಜನ್ ಡಾ. ನಾಗೇಶ್ ಅವರನ್ನು ಏಕಕಾಲದಲ್ಲಿ ವರ್ಗಾವಣೆಗೊಳಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಾಗಲು ಕಾರಣವಾಗಿದೆ.
ಎಂಜಿಎಂ ಆಸ್ಪತ್ರೆಗೆ ಆಡಳಿತಾಧಿಕಾರಿ ಯಾಗಿ ಡಾ.ಪ್ರಿಯಾಂಕ ಅಧಿಕಾರ ವಹಿಸಿ ಕೊಂಡ ನಂತರ ಹಲವು ಸುಧಾರಣೆಗ ಳನ್ನು ಕಂಡಿದ್ದು, ಹಲವು ವರ್ಷಗಳಿಂದ ಮುಚ್ಚಿದ್ದ ಶಸ್ತ್ರ ಚಿಕಿತ್ಸಾ ಕೇಂದ್ರ ಪುನರ್ ಕಾರ್ಯಚರಣೆಗಿಳಿದಿದ್ದು, ಒಳರೋಗಿಗಳ ಸಂಖ್ಯೆಯೂ ಹೆಚ್ಚಳ ಕಾಣುತ್ತಿತ್ತು. ಇನ್ನೇನು ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಆರೋಗ್ಯ ಇಲಾಖೆಯು ಮತ್ತೆ ನಾಲ್ಕು ವೈದ್ಯರನ್ನು ವರ್ಗಾವಣೆ ಗೊಳಿಸುವ ಮೂಲಕ ಆಸ್ಪತ್ರೆಯು ಹಳೆ ಹಾದಿಯನ್ನೆ ತುಳಿಯುವಂತೆ ಮಾಡಿದೆ.
ಮಹಾತ್ಮಗಾಂಧಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 15 ಜನ ವೈದ್ಯರ ಸೇವೆಗೆ ಮಂಜೂರಾತಿ ದೊರೆತ್ತಿದ್ದರೂ, ಈಗ ಕಾರ್ಯ ನಿರ್ವಹಿಸುತ್ತಿರುವುದು ಕೇವಲ ಆರು ಜನ ವೈದ್ಯರು ಮಾತ್ರ, ಐದು ಹೋಬಳಿಗಳನ್ನು ಹೊಂದಿರುವ ತಾಲ್ಲೂಕು ಕೇಂದ್ರದಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು ಭೇಟಿ ನೀಡು ತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ದಿರುವುರಿಂದ ಸಾಲ ಮಾಡಿ ಖಾಸಗಿ ಆಸ್ಪತ್ರೆಯತ್ತ ತೆರಳುವಂತಾಗಿದೆ.
ತಾಲ್ಲೂಕಿನಲ್ಲಿ ಕಾಫಿ ಕೊಯ್ಲು ನಡೆಯುತ್ತಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಕಾರ್ಮಿಕರು ವಲಸೆ ಬಂದಿದ್ದು, ವಾತಾವರಣ ಹೊಂದಾಣಿ ಕೆಯ ಸಮಸ್ಯೆಯಿಂದಾಗಿ ಆರೋಗ್ಯದಲ್ಲಿ ಏರುಪೇರಾದರೂ, ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ದೊರೆಯದಂತಹ ವಾತಾ ವರಣ ಸೃಷ್ಟಿಯಾಗಿದೆ.
ತಾಲ್ಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಯೂ ಭಿನ್ನವಾಗಿಲ್ಲ. ತಾಲ್ಲೂಕಿನಲ್ಲಿ 24 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಲು 22 ವೈದ್ಯರ ಅವಶ್ಯಕತೆ ಇದ್ದು, ಪ್ರಸ್ತುತ 5 ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿ ದ್ದರೆ. ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಾಗಿಲು ಮುಚ್ಚುವ ಸ್ಥಿತಿಯತ್ತ ತೆರಳಿದ್ದು ಗ್ರಾಮೀಣ ಭಾಗದ ಜನತೆ ಆರೋಗ್ಯ ಸೇವೆಗಾಗಿ ಪರಿತಪಿಸುವಂತಾಗಿದೆ.
ವೈದ್ಯರ ಕೊರತೆಯಿಂದ ಸಣ್ಣ ಪುಟ್ಟ ರೋಗಗಳಿಗೂ ಜಿಲ್ಲಾ ಕೇಂದ್ರ, ಹಾಸನ ಅಥವಾ ಮಂಗಳೂರಿಗೆ ತೆರಳಬೇಕಾ ದಂತಹ ಸ್ಥಿತಿ ಬಂದೊದಗಿದೆ.
ಎಂಜಿಎಂ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನಿರ್ಮಾಣವಾಗಿರುವುದರಿಂದ, ಇರುವ ವೈದ್ಯರಿಗೆ ಕಾರ್ಯಭಾರ ಹೆಚ್ಚಿದ್ದು, ಇದರಿಂದಾಗಿ ಕಾರ್ಯನಿರ್ವಹಿ ಸುತ್ತಿರುವ ವೈದ್ಯರೂ ಕೂಡ ವರ್ಗಾವಣೆ ಯತ್ತ ಮುಖ ಮಾಡುತ್ತಿದ್ದಾರೆ.
ಸರ್ಕಾರ ಕೊಟ್ಯಾಂತರ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಮಾಡು ತ್ತಿದ್ದರೂ ಅವುಗಳನ್ನು ರೋಗಿಗಳಿಗೆ ತಲುಪಿಸಲು ವೈದ್ಯರಿಲ್ಲದಂತಾಗಿದೆ. ಕೂಡಲೇ ಆರೋಗ್ಯ ಇಲಾಖೆಯು ವರ್ಗಾವಣೆಗೊಂಡಿರುವ ವೈದ್ಯರ ಸ್ಥಾನವನ್ನು ಭರ್ತಿ ಮಾಡಿ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸಬೇಕು ಎಂಬುದು ಒತ್ತಾಯ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.