ಸೋಮವಾರ, ಏಪ್ರಿಲ್ 19, 2021
29 °C

ಕೇಳ್ರಪ್ಪೋ... ಇದು ಅಧಿಕ ವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಕ್ಯಾಲೆಂಡರ್‌ನಲ್ಲಿ 365 ದಿನಗಳು ಯಾಕಿವೆ? ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಫೆಬ್ರುವರಿಯಲ್ಲಿ ಒಂದು ದಿನ ಹೆಚ್ಚಾಗುವುದು ಏಕೆ?

ಭೂಮಿ ನಿಂತಂತೆ ಭಾಸವಾಗುತ್ತದಾದರೂ ಅದು ನಿಯಮಿತ ವೇಗದಲ್ಲಿ ಸುತ್ತುತ್ತಿರುತ್ತದೆ. ಪ್ರತಿ ಗಂಟೆಗೆ 800 ಕಿ.ಮೀ. ವೇಗದಲ್ಲಿ ಸುತ್ತುವ ಬುಗುರಿಯಂತೆಯೇ ಭೂಮಿಯೂ ಸುತ್ತುತ್ತದೆ.ತನ್ನ ಪಥದಲ್ಲಿ ಸುತ್ತುತ್ತಾ ಸೂರ್ಯನನ್ನೂ ಅದು ಸುತ್ತು ಹಾಕುತ್ತದೆ. 93,98,86,400 ಕಿ.ಮೀ.ನಷ್ಟು ಪಯಣವಿದು. ಭೂಮಿಯು ಪ್ರತಿ ಗಂಟೆಗೆ ಒಂದು ಲಕ್ಷ ಕಿ.ಮೀ. ವೇಗದಲ್ಲಿ ಸುತ್ತುತ್ತಾ 365.242 ದಿನಗಳಲ್ಲಿ ಅಷ್ಟು ದೂರವನ್ನು ಕ್ರಮಿಸುತ್ತದೆ. ಸೂರ್ಯನನ್ನು ಒಂದು ಸುತ್ತು ಹಾಕಲು ಭೂಮಿ ತೆಗೆದುಕೊಳ್ಳುವ ಕಾಲಾವಧಿಯೇ ಒಂದು ವರ್ಷ.ಹೀಗಾಗಿಯೇ ಒಂದು ವರ್ಷದಲ್ಲಿ 365 ದಿನಗಳಿವೆ. ಉಳಿದ 0.242 ದಿನವನ್ನು ಸೇರಿಸುತ್ತಾ ಹೋಗಿ, ನಾಲ್ಕು ವರ್ಷಕ್ಕೊಮ್ಮೆ ಇನ್ನೊಂದು ದಿನವೆಂದು ಪರಿಗಣಿಸುತ್ತೇವೆ. ಆ ವರ್ಷವನ್ನು ಅಧಿಕ ವರ್ಷ ಎನ್ನುತ್ತಾರೆ.1900 ಯಾಕೆ ಅಧಿಕ ಮಾಸದ ವರ್ಷ ಆಗಿರಲಿಲ್ಲ?

1900 ನಾಲ್ಕರಿಂದ ಭಾಗಿಸಬಹುದಾದ ಸಂಖ್ಯೆಯಾದರೂ ಅದು ಅಧಿಕ ವರ್ಷ ಆಗಿರಲಿಲ್ಲ. 365.242 ಎಂಬುದನ್ನು ನಾವು `ರೌಂಡ್~ ಮಾಡಿ 365.25 ಎಂದು ಪರಿಗಣಿಸಿ ಅಧಿಕ ವರ್ಷ ನಿರ್ಧರಿಸಿದೆವು.

 

ಆದರೆ, ಅಳತೆಯಲ್ಲಿನ ಈ ಬದಲಾವಣೆಯಿಂದ ಭೂಮಿಯ ಪಯಣದ 11 ನಿಮಿಷ ವ್ಯತ್ಯಾಸವನ್ನು ನಾವು ಕಡೆಗಣಿಸಿದಂತಾಗುತ್ತದೆ. ಅದೇ ಕಾರಣಕ್ಕೆ ಪ್ರತಿ 400 ವರ್ಷಗಳಲ್ಲಿ ಮೂರು ಸಲ ಅಧಿಕ ವರ್ಷವನ್ನು ಬಿಡಲಾಗುತ್ತದೆ. 1900 ಹಾಗಾಗಿಯೇ ಅಧಿಕ ವರ್ಷ ಆಗಿರಲಿಲ್ಲ. ಅಂತೆಯೇ 1700 ಹಾಗೂ 1800 ಕೂಡ ಅಧಿಕ ವರ್ಷಗಳಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.