ಭಾನುವಾರ, ಜೂನ್ 13, 2021
20 °C

ಕೇಳ್ರಪ್ಪೋ ಕೇಳ್ರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವೀನ್‌ ಪಟ್ನಾಯಕ್‌ ಅವರು ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ವಿರೋಧ ಪಕ್ಷಗಳ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಅವರು ಯಾವ ಮೌಲ್ಯವನ್ನು ಪ್ರತಿಪಾದಿಸುತ್ತಿದ್ದಾರೆ?

ಬಿ.ಕೆ. ಹರಿಪ್ರಸಾದ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಒಂದೊಂದು ಚುನಾವಣೆಯಲ್ಲಿ ಒಂದೊಂದು ಪಕ್ಷ ಬದಲಿಸುತ್ತಿದ್ದೇನೆ ಎಂಬ ಆರೋಪ ನನ್ನ ಮೇಲಿರುವುದು ನಿಜ. ಆದರೆ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇರುವ ನನಗೆ ಗೆದ್ದ ಎತ್ತಿನ ಬಾಲ ಹಿಡಿಯುವುದು ಅನಿವಾರ್ಯ

ಸಿ. ಪಿ. ಯೋಗೇಶ್ವರ

ರಾಜಕೀಯದ ಮೊದಲ ಪುಟದ ಪಾಠ ವಂಚನೆ, ಕೊನೆಯ ಪಾಠ ಕೊಲೆ ಅಥವಾ ನಿರ್ನಾಮ ಎನ್ನುವುದು ಈಗ ನನ್ನ ಅರಿವಿಗೆ ಬರುತ್ತಿದೆ.

ಶಿವರಾಮಗೌಡ, ಕೊಪ್ಪಳ ಸಂಸದ

ಎಎಪಿಯನ್ನು ಕಾಂಗ್ರೆಸ್‌ ಪ್ರೋತ್ಸಾಹಿಸುತ್ತಿದೆ. ಆದರೆ ಇಂದು ಎಎಪಿಯೇ ಕಾಂಗ್ರೆಸ್‌ ಕಾಲಿಗೆ ತುಳಿದಿದೆ.  ಕಾಂಗ್ರೆಸ್‌ಗೆ ಎಎಪಿಗಿಂತ ಬಹಳ ದೊಡ್ಡ ವೋಟ್‌ ಬ್ಯಾಂಕ್‌ ಇದೆ. ಎಎಪಿಯದ್ದು ಪ್ರಚಾರದ ತಂತ್ರ ಮಾತ್ರ. ಹಾಗಾಗಿ ಮಾಧ್ಯಮದಲ್ಲಿ ದೊರೆಯುವ ಪ್ರಚಾರದಲ್ಲಿ ಕಾಂಗ್ರೆಸ್‌ಗಿಂತ ಎಎಪಿ ಬಹಳ ಮುಂದೆ ಇದೆ.

ಅರುಣ್ ಜೇಟ್ಲಿ, ರಾಜ್ಯಸಭೆ ವಿರೋಧ ಪಕ್ಷ ನಾಯಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.