ಕೇಶದ ಬೇಕು ಬೇಡಗಳು

7

ಕೇಶದ ಬೇಕು ಬೇಡಗಳು

Published:
Updated:

ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಕೂದಲಿನ ಪಾತ್ರ ಮಹತ್ವದ್ದು. ಆದರೆ ಮುಖದಲ್ಲಿ ಹಾಗೂ ದೇಹದ ವಿವಿಧೆಡೆ ಅನಗತ್ಯವಾಗಿ ಬೆಳೆಯುವ ಕೂದಲಿನಿಂದ ಅಂದ ಕೆಡುವುದೂ ಇದೆ. ನೋಡುವುದಕ್ಕೆ ಅಸಹ್ಯ ಎನಿಸುವ ಸಂದರ್ಭಗಳೂ ಇವೆ. ಹೀಗಾಗಿಯೇ ದೇಹದಲ್ಲಿ ಬೆಳೆದ ಅನಗತ್ಯ ಕೂದಲುಗಳನ್ನು ತೆಗೆದುಹಾಕಲು ಅನೇಕಾನೇಕ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.ಹಿಂದಿನ ಕಾಲದಂತೆ ಮೈಪೂರ್ತಿ ಬಟ್ಟೆ ಮುಚ್ಚಿಕೊಳ್ಳುತ್ತಿದ್ದ ಜಾಯಮಾನ ಬದಲಾಗಿ ಸ್ಲೀವ್‌ಲೆಸ್‌ ಮುಂತಾದ  ಟ್ರೆಂಡ್‌ ಮನೆಮಾತಾಗಿದೆ. ಹೀಗೆ ಬದಲಾವಣೆಯ ಗಾಳಿ ಬೀಸುತ್ತಿದ್ದಂತೆ ಮುಖ ಕೈ ಮೇಲೆ ಸಹಜವಾಗಿ ಮೂಡಿದ್ದ ರೋಮ ಬೇಡ ಎಂದೆನಿಸಿದೆ. ಹುಬ್ಬನ್ನು ಅಂದಗಾಣಿಸುವುದು ಹಾಗೂ ದೇಹದಲ್ಲಿ ಅನಗತ್ಯವಾಗಿ ಬೆಳೆದ ಕೂದಲುಗಳನ್ನು ವ್ಯಾಕ್ಸಿಂಗ್‌, ಕ್ರೀಂ ಅಥವಾ ರೇಜರ್‌ ಮೂಲಕ ತೆಗೆದುಹಾಕುವ ಮನಸ್ಥಿತಿ ಬೆಳೆದಿದೆ.ಹೀಗಾಗಿಯೋ ಏನೋ ಬ್ಯೂಟಿಪಾರ್ಲರ್‌ಗಳು ನಾಯಿಕೊಡೆಗಳಂತೆ ಎದ್ದು ನಿಂತಿವೆ. ಭಾರತೀಯರಲ್ಲಿ ಈ ಟ್ರೆಂಡ್‌ ಇತ್ತೀಚೆಗೆ ಹೆಚ್ಚಾಗುತ್ತಿದೆ ನಿಜ. ಆದರೆ ವಿವಿಧ ಬಗೆಯ ಉಡುಪು ಧರಿಸಿ ಅಂದವಾಗಿ ಕಾಣುವ ವಿದೇಶಿ ಮಹಿಳೆಯರು ಚೆಂದ ವರ್ಧನೆಗೆ ಧಾರಾಳವಾಗಿ ಹಣವನ್ನು ಖರ್ಚು ಮಾಡುತ್ತಿದ್ದಾರೆ.ಇಂಗ್ಲೆಂಡ್‌ನಲ್ಲಿ ನಡೆಸಲಾದ ಅಧ್ಯಯನವೊಂದರ ಪ್ರಕಾರ ಅಲ್ಲಿಯ ಮಹಿಳೆಯರು ತಮ್ಮ ಜೀವಮಾನದಲ್ಲಿ ಸುಮಾರು `8ಲಕ್ಷಕ್ಕೂ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಾರಂತೆ. ಈ ಪ್ರಕ್ರಿಯೆಯಲ್ಲಿ ಅವರು ಕಳೆಯುವ ಸಮಯ ನಾಲ್ಕು ತಿಂಗಳಿಗೂ ಹೆಚ್ಚು ಎಂದು ‘ಫೀಮೇಲ್‌ಫಸ್ಟ್‌’ ವರದಿ ಮಾಡಿದೆ.ಬೇಕಾದಷ್ಟು ಹಣ ಖರ್ಚಾಗಲಿ ಆದರೆ ಅನಗತ್ಯ ಕೂದಲಿನ ಗೊಡವೆ ಹೊರಲಾರೆವು ಎನ್ನುವ ಅನೇಕ ಮಹಿಳೆಯರು ₨10 ಲಕ್ಷ ವ್ಯಯಿಸಲೂ ಸಿದ್ಧರಿದ್ದಾರಂತೆ. ಅನಗತ್ಯ ಕೂದಲು ಮೈಮೇಲೆ ಇದ್ದರೆ ಆತ್ಮವಿಶ್ವಾಸ ಕುಂದುತ್ತದೆ ಎಂಬುದು ವಿದೇಶಿ ಮಹಿಳೆಯರು ನೀಡುವ ಸಬೂಬು.ಅಂತೆಯೇ ಕೇಶವಿನ್ಯಾಸ ಹಾಗೂ ಅದಕ್ಕೆ ವಿವಿಧ ವರ್ಣದ ಮೆರಗು ಕೊಡುವುದು ಕೂಡ ಮಾಮೂಲಾಗಿದೆ. ಸಿನಿಮಾಗಳಲ್ಲಿ ಹೊಸಹೊಸ ರೀತಿಯಲ್ಲಿ ನಟ ನಟಿಯರು ಕಾಣಿಸಿಕೊಂಡರೆ ಸಿನಿಮಾ ಹಾಗೂ ರಿಯಾಲಿಟಿ ವ್ಯತ್ಯಾಸ ಗುರುತಿಸಲಾಗದ ರೀತಿಯಲ್ಲಿ ಇಂದಿನ ಯುವಜನಾಂಗ ಬಣ್ಣದ ಮೊರೆ ಹೋಗಿದೆ.ಕೂದಲು ಹಾಳಾಗುತ್ತವೆ ಎಂಬ ಕಾರಣಕ್ಕೆ ಕಲರಿಂಗ್‌ ಬಗ್ಗೆ ಅಷ್ಟಾಗಿ ಮನಸ್ಸು ಮಾಡದ ಮನಸ್ಥಿತಿ ಭಾರತೀಯರಲ್ಲಿ ಇನ್ನೂ ಇದೆಯಾದರೂ ಇಂಗ್ಲೆಂಡ್‌ ಮಹಿಳೆಯರು ಒಂದು ವರ್ಷದಲ್ಲಿ ಕೇಶ ವರ್ಣಕ್ಕಾಗಿ ವ್ಯಯಿಸುವ ಹಣ ` 2,2000 ಕ್ಕೂ ಹೆಚ್ಚು. ಅಲ್ಲಿಯ ಪತ್ರಿಕೆಯೊಂದರ ವರದಿ ಪ್ರಕಾರ 22 ವರ್ಷ ವಯಸ್ಸಿನಿಂದ 65 ವರ್ಷ ವಯಸ್ಸಿನ ಮಹಿಳೆಯರು ಜೀವಮಾನದಲ್ಲಿ ₨9.82 ಲಕ್ಷ ಹಣವನ್ನು ಬಣ್ಣ ಬಣ್ಣದ ಕೇಶವಿನ್ಯಾಸಕ್ಕಾಗಿ ಬಳಸಿಕೊಳ್ಳುತ್ತಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry