ಭಾನುವಾರ, ಆಗಸ್ಟ್ 25, 2019
21 °C
ರಾಜ್ಯ ಜೂನಿಯರ್ ಅಥ್ಲೆಟಿಕ್ಸ್: ಆಳ್ವಾಸ್ ಕಾಲೇಜು ಸ್ಪರ್ಧಿಗಳ ಪ್ರಾಬಲ್ಯ

ಕೇಶವನ್, ರಾಹತ್ ಕೂಟ ದಾಖಲೆ

Published:
Updated:
ಕೇಶವನ್, ರಾಹತ್ ಕೂಟ ದಾಖಲೆ

ಶಿವಮೊಗ್ಗ: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸ್ಪರ್ಧಿಗಳು ಇಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ ಅಥ್ಲೆಟಿಕ್ ಕೂಟದ ಎರಡನೇ ದಿನ ತಮ್ಮ ಪ್ರಾಬಲ್ಯ ಮೆರೆದರು. ಭಾನುವಾರ ಎರಡು ಕೂಟ ದಾಖಲೆಗಳು ಮೂಡಿಬಂದವು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಪದೇಪದೇ ಮಳೆ ಸುರಿಯುತ್ತಿದ್ದರೂ ಯುವ ಅಥ್ಲೀಟ್‌ಗಳ ಉತ್ಸಾಹಕ್ಕೆ ಭಂಗ ಉಂಟಾಗಲಿಲ್ಲ. ಆಳ್ವಾಸ್ ಕಾಲೇಜಿನ ಆರ್.ಕೇಶವನ್ 16 ವರ್ಷದೊಳಗಿನ ಬಾಲಕರ ಹ್ಯಾಮರ್ ಎಸೆತದಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ರಾಹತ್.ಎನ್.ಸಯೀದ್ 14 ವರ್ಷದೊಳಗಿನ ಬಾಲಕಿಯರ ಶಾಟ್‌ಪಟ್‌ನಲ್ಲಿ ನೂತನ ಕೂಟ ದಾಖಲೆಗಳನ್ನು ಬರೆದರು.ಎರಡನೇ ದಿನ ಚಿನ್ನ ಗೆದ್ದವರ ವಿವರ:  ಬಾಲಕರ ವಿಭಾಗ:

14 ವರ್ಷದೊಳಗಿನವರು: ಟ್ರಯಥ್ಲಾನ್: ಸಚಿನ್.ಎಂ.ನಾಯಕ್ (ಉಡುಪಿ. ಪಾಯಿಂಟ್: 1246)

16 ವರ್ಷದೊಳಗಿನವರು:100 ಮೀಟರ್ ಓಟ
: ನಿಶಾಲ್ ಕುದೂರು (ದಕ್ಷಿಣ ಕನ್ನಡ. ಕಾಲ: 11.5 ಸೆ.). ಶಾಟ್‌ಪಟ್: ಆರ್.ಕೇಶವನ್ (ಆಳ್ವಾಸ್ ಕಾಲೇಜು. ದೂರ: 13.20 ಮೀ). ಹ್ಯಾಮರ್ ಥ್ರೋ: ಆರ್.ಕೇಶವನ್ (ಆಳ್ವಾಸ್ ಕಾಲೇಜು. ದೂರ: 51.28 ಮೀ). ಲಾಂಗ್‌ಜಂಪ್: ಎಸ್.ಲೋಕೇಶ್ (ಐ.ಎ.ಎ.ಬೆಂಗಳೂರು, ದೂರ: 5.90 ಮೀ). ಜಾವೆಲಿನ್ ಎಸೆತ: ಆರ್.ವಿನೋದ್ ಕುಮಾರ್ (ಕೋಲಾರ. ದೂರ: 38.50 ಮೀ). 100 ಮೀಟರ್ ಹರXಲ್ಸ್: ಅಮನ್ ಅರುಣ್ (ಆಳ್ವಾಸ್ ಕಾಲೇಜು. ಕಾಲ: 16.00 ಸೆ).18 ವರ್ಷದೊಳಗಿನವರು:

3000 ಮೀಟರ್ ಓಟ:
ತ್ರಿಶಾಲ್ (ಆಳ್ವಾಸ್ ಕಾಲೇಜು: ಸಮಯ: 9.28.9 ಸೆ.). 100 ಮೀಟರ್ ಓಟ: ಸಲೀಮ್ ಶಾನ್ (ಎಸ್.ಎ.ಐ. ಬೆಂಗಳೂರು. ಕಾಲ: 10.9 ಸೆ.). 10,000 ಮೀ ನಡಿಗೆ: ರಾಹುಲ್ ಎನ್.ಅಷ್ಟಗಿ (ಎಸ್‌ಎಐ ಧಾರವಾಡ. ಕಾಲ: 46ನಿ 39.9 ಸೆ). ಶಾಟ್‌ಪಟ್: ಜಿ.ಗೌತಮ್ (ಆಳ್ವಾಸ್ ಕಾಲೇಜು, ದೂರ: 14.46 ಮೀ). ಲಾಂಗ್‌ಜಂಪ್: ಸಂದೇಶ್ (ಆಳ್ವಾಸ್ ಕಾಲೇಜು. ದೂರ: 6.65 ಮೀ). ಹ್ಯಾಮರ್ ಎಸೆತ: ಗವಿಸ್ವಾಮಿ ಮನೋಹರ್ (ಆಳ್ವಾಸ್ ಕಾಲೇಜು. ದೂರ: 61.00 ಮೀ). 110 ಮೀ. ಹರXಲ್ಸ್: ಸಂತೋಷ್ (ಆಳ್ವಾಸ್ ಕಾಲೇಜು. ಕಾಲ: 14.7 ಸೆ.). 1500 ಮೀ. ಹರXಲ್ಸ್: ಎಚ್.ಎನ್.ತ್ರಿಶೂಲ್ (ಆಳ್ವಾಸ್ ಕಾಲೇಜು. ಕಾಲ: 4 ನಿ.21.2 ಸೆ)20 ವರ್ಷದೊಳಗಿನವರು:

ಹೈಜಂಪ್
: ಹರ್ಷಿತ್ (ಬೆಂಗಳೂರು ಸ್ಪೋರ್ಟ್ಸ್ ಕ್ಲಬ್: ಎತ್ತರ: 2.08 ಮೀ.)

ಟ್ರಿಪಲ್ ಜಂಪ್: ಎಸ್.ಇ.ಶಂಶೀರ್ (ಆಳ್ವಾಸ್ ಕಾಲೇಜು: ದೂರ: 14.14 ಮೀ),

100 ಮೀಟರ್ ಓಟ: ಎನ್.ವೈಶಾಖ್ (ಆಳ್ವಾಸ್ ಕಾಲೇಜು. ಕಾಲ: 10.8ಸೆ),

10,000 ಮೀಟರ್ ನಡಿಗೆ: ಅಕ್ಷಯ್ ಬಿ.ತಲ್ವಾರ್ (ಎಸ್‌ಡಿಎಂ ಉಜಿರೆ: ಕಾಲ: 53 ನಿ. 26.9 ಸೆ),

ಲಾಂಗ್‌ಜಂಪ್: ಎಸ್.ಇ.ಶಂಶೀರ್ (ಆಳ್ವಾಸ್ ಕಾಲೇಜು. ದೂರ: 7.15 ಮೀ.).

5,000 ಮೀ. ಓಟ: ಪರಸಪ್ಪ ಎಂ.ಹೊಲಿಜೋಳ್ (ಎಸ್‌ಎಐ ಧಾರವಾಡ, ಕಾಲ: 15 ನಿ.55.36 ಸೆ.),

ಡಿಸ್ಕಸ್ ಎಸೆತ: ಸಾಯಿರಾಜ್ (ಆಳ್ವಾಸ್ ಕಾಲೇಜು. ದೂರ: 40.24 ಮೀ.),

ಹ್ಯಾಮರ್ ಎಸೆತ: ಮಹಮ್ಮದ್ ಸೂಫಿಯಾನ್ (ವೈ.ಎಸ್.ಬೆಂಗಳೂರು, ದೂರ: 42.50 ಮೀ),

110 ಮೀ.ಹರ್ಡಲ್ಸ್ : ಆಶೀಶ್ ಸಿಂಗ್. (ಫ್ಯೂಷನ್ ಅಥ್ಲೆಟಿಕ್ ಕ್ಲಬ್ ಬೆಂಗಳೂರು. ಕಾಲ: 14.8 ಸೆ).

4X110 ರಿಲೇ: ಆಳ್ವಾಸ್ ಕಾಲೇಜು (ಕಾಲ: 44.1 ಸೆ).ಬಾಲಕಿಯರ ವಿಭಾಗ: 14 ವರ್ಷದೊಳಗಿನವರು: 

ಟ್ರಯಥ್ಲಾನ್: ಟಾಮಿ ವೈಷ್ಣವಿ  (ಇಂಡೋ ಜರ್ಮನ್ ಸ್ಪೋರ್ಟ್ಸ್ ಕ್ಲಬ್. ಪಾಯಿಂಟ್: 1503). ಶಾಟ್‌ಪಟ್: ರಾಹತ್ ಎನ್.ಸಯೀದ್ (ಉತ್ತರಕನ್ನಡ. ದೂರ: 9.69 ಮೀ). ಲಾಂಗ್‌ಜಂಪ್: ಟಾಮಿ ವೈಷ್ಣವಿ (ಇಂಡೋ ಜರ್ಮನ್ ಸ್ಪೋರ್ಟ್ಸ್ ಕ್ಲಬ್. ದೂರ: 4.94 ಮೀ)16 ವರ್ಷದೊಳಗಿನವರು: 100 ಮೀ. ಹರXಲ್ಸ್. ಸುಷ್ಮಾ ರಾಮ್ (ಎಸ್‌ಎಐ ಬೆಂಗಳೂರು, ಕಾಲ. 16.5 ಸೆ). ಲಾಂಗ್‌ಜಂಪ್: ದೀಕ್ಷಾ (ದಕ್ಷಿಣ ಕನ್ನಡ. ಕಾಲ: 5.02 ಮೀ).18 ವರ್ಷದೊಳಗಿನವರು: 100 ಮೀ. ಹರXಲ್ಸ್. ಎಸ್‌ಜಿ.ಪ್ರಿಯಾಂಕ (ಡಿವೈಎಸ್‌ಎಸ್ ಮೈಸೂರು. ಕಾಲ: 14.6ಸೆ). 1500 ಮೀಟರ್ ಓಟ: ಸಿ.ಪೂರ್ಣಿಮಾ (ಡಿವೈಎಸ್‌ಎಸ್ ಮೈಸೂರು: ಕಾಲ: 4 ನಿ.57.40 ಸೆ).20 ವರ್ಷದೊಳಗಿನವರು: ಡಿಸ್ಕಸ್ ಎಸೆತ: ಎಂ.ಎಸ್.ನವ್ಯಾ ಶೆಟ್ಟಿ (ದಕ್ಷಿಣ ಕನ್ನಡ. ದೂರ: 32.95 ಮೀ.).

4X100 ರಿಲೇ: ಆಳ್ವಾಸ್ ಕಾಲೇಜು (ಕಾಲ: 50.3 ಸೆ).

100 ಮೀ. ಹರ್ಡಲ್ಸ್ : ಮೇಘನಾ ಶೆಟ್ಟಿ (ಎಸ್‌ಎಐ ಬೆಂಗಳೂರು: ಕಾಲ: 15.00 ಸೆ.),

1,500 ಮೀಟರ್ ಓಟ: ಎಸ್. ಶ್ರದ್ಧಾರಾಣಿ (ಡಿವೈಎಸ್‌ಎಸ್ ಮೈಸೂರು. ಕಾಲ: 5 ನಿ. 08.00 ಸೆ).

ಲಾಂಗ್‌ಜಂಪ್: ಬಿ.ವಿ.ಚಾಂದಿನಿ (ಆಳ್ವಾಸ್ ಕಾಲೇಜು. ದೂರ: 5.36 ಮೀ).

Post Comments (+)