ಕೇಶ ವಿನ್ಯಾಸಕ್ಕೆ ಟ್ರೆಸ್ಸಿಮಿ ಮೆರುಗು

7

ಕೇಶ ವಿನ್ಯಾಸಕ್ಕೆ ಟ್ರೆಸ್ಸಿಮಿ ಮೆರುಗು

Published:
Updated:

ತುರ್ತಾಗಿ ಯಾವುದೋ ಸಮಾರಂಭಕ್ಕೆ ಹಾಜರಾಗಬೇಕು ಎಂಬ ಅನಿವಾರ್ಯತೆ ಎದುರಾದಾಗ ಯಾವ ಉಡುಗೆ ಧರಿಸಬೇಕು ಎಂಬುದನ್ನಾದರೂ ಬೇಗನೆ ನಿರ್ಧರಿಸಿಬಿಡಬಹುದು. ಮುಖದ ಕಾಂತಿ ಹೆಚ್ಚಿಸಲು ದಿಢೀರ್ ಮಾರ್ಗೋಪಾಯಗಳೂ ನಮ್ಮಲ್ಲಿವೆ. ಆದರೆ ಕೇಶಕ್ಕೆ?ಕೈಲಿರುವ ಸೀಮಿತ ಅವಧಿಯಲ್ಲಿ ತಲೆ ಸ್ನಾನ ಮಾಡಿಕೊಂಡು ಶಾಂಪೂ ಮಾಡಿ, ಕಂಡಿಷನರ್ ಹಾಕಿಕೊಂಡರೂ ಬ್ಯೂಟಿಪಾರ್ಲರ್ ಇಲ್ಲವೇ ಸಲೂನ್‌ನಲ್ಲಿ ವೃತ್ತಿಪರ ಕೈಗಳು ಮಾಡಿದಂತೆ ನಯ, ನಾಜೂಕಿನ ಸ್ಪರ್ಶ ಕೂದಲಿಗೆ ಸಿಗುವುದಿಲ್ಲ ಎಂಬ ಕೊರತೆ ಕಾಡುತ್ತದೆ. ಹಾಗಂತ ಸಲೂನ್‌ಗೆ ಹೋಗಿ ಬರುವಷ್ಟು ಸಮಯವಿಲ್ಲ.ಅಯ್ಯೋ ಇಂತಹ ಚಿಂತೆಗಳನ್ನು ಬದಿಗಿಡಿ. ಇದೋ ನಮ್ಮ ಹೊಸ ಶ್ರೇಣಿಯ ಉತ್ಪನ್ನಗಳನ್ನು ಬಳಸಿ ನೋಡಿ. ಮನೆಯಲ್ಲೇ ಸಲೂನ್ ಶೈಲಿಯ `ಚಿಕಿತ್ಸೆ~ ನಿಮ್ಮ ಕೂದಲಿಗೆ ಸಿಗುವ ಮಜಾ ಅನುಭವಿಸಿ ಎನ್ನುತ್ತಿದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ `ಟ್ರೆಸ್ಸಿಮೆ~ ಸರಣಿ ಉತ್ಪನ್ನಗಳು.ಹಿಂದೂಸ್ತಾನ್ ಲಿವರ್‌ನ ಉತ್ಪನ್ನವಾದ ಟ್ರೆಸ್ಸಿಮೆ, ಇತ್ತೀಚೆಗೆ ಮುಂಬೈನ ಕೊಲಾಬದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಹಿಂದೂಸ್ತಾನ್ ಲಿವರ್ ಲಿಮಿಟೆಡ್‌ನ ಮುಖ್ಯ ವ್ಯವಸ್ಥಾಪಕ (ಕೇಶ ರಕ್ಷಣೆ)  ಶ್ರೀನಂದನ್ ಸುಂದರಮ್ ಅವರ ಮಾತಿನ ಮುಖ್ಯಾಂಶವೂ ಇದುವೇ, `ಪಾರ್ಲರ್‌ನಲ್ಲಿ ಸಿಗುವ ಕೇಶ ರಕ್ಷಣಾ ಸೇವೆಗಳನ್ನು ಮನೆಯಲ್ಲಿ ತಾವೇ ಮಾಡಿಕೊಳ್ಳುವಂತಾದರೆ ಗ್ರಾಹಕರಿಗೆ ಸಮಯ ಮತ್ತು ತಿಂಗಳ ಬಜೆಟ್‌ನಲ್ಲಿ ಉಳಿತಾಯವಾಗುವುದು ಖಚಿತ. `ಟ್ರೆಸ್ಸಿಮಿ~ ಸರಣಿಯಲ್ಲಿ ಈ ಬಾರಿ ಕೆಲವು ವಿಶಿಷ್ಟ ಮತ್ತು ವಿಭಿನ್ನವಾದ ಉತ್ಪನ್ನಗಳನ್ನೂ ಪರಿಚಯಿಸಲಾಗಿದೆ. ವಿಶೇಷವಾಗಿ, ಕ್ಲೈಮೇಟ್ ಪ್ರೊಟೆಕ್ಷನ್ ಶಾಂಪೂ ಮತ್ತು ಕಂಡಿಷನರ್ ಹವಾಮಾನ ಬದಲಾವಣೆಯಿಂದ ಕೂದಲಿಗೆ ಹಾನಿಯುಂಟಾಗುವುದನ್ನು ತಡೆಯುತ್ತದೆ. ವಿಟಮಿನ್ ಎಚ್ ಸಮೃದ್ಧವಾಗಿರುವ ಸಲೂನ್ ಸಿಲ್ಕ್ ಮಾಯಿಶ್ಚರ್ ಕೂದಲು ಒಣಗದಂತೆ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ.

 

ಎಲ್ಲಾ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕೈಗೆಟಕುವ ಬೆಲೆಯನ್ನು ನಿಗದಿಮಾಡಲಾಗಿದೆ. ಸೌಂದರ್ಯ ಮತ್ತು ಕೇಶ ರಕ್ಷಣೆ ಉತ್ಪನ್ನಗಳು ಸಿಗುವ ಎಲ್ಲಾ ಮಳಿಗೆಗಳಲ್ಲೂ ಟ್ರೆಸ್ಸಿಮೆ ಸರಣಿ ಉತ್ಪನ್ನಗಳು ಲಭ್ಯ~ ಎಂದರು.ಕೊಲಾಬದ ತಾಜ್ ಪ್ರೆಸಿಡೆನ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಟ್ರೆಸ್ಸಿಮಿ ಉತ್ಪನ್ನಗಳ ಬಳಕೆಯ ಪ್ರಾತ್ಯಕ್ಷಿಕೆ ಮತ್ತು ಸ್ವತಃ ಅನುಭವ ಪಡೆಯುವ ಅವಕಾಶವಿತ್ತು. ಹೆಸರಾಂತ ಕೇಶ ವಿನ್ಯಾಸಕ ಧರ್ಮೇಶ್ ಹಿಂಗೋರನಿ (ಡೊಡೊ) ಅವರ ಕೇಶ ವಿನ್ಯಾಸಗಳನ್ನು ಎಂಟು ಮಂದಿ ರೂಪದರ್ಶಿಯರು ರ‌್ಯಾಂಪ್‌ನಲ್ಲಿ ಪ್ರದರ್ಶಿಸಿದರು. ಫಟಾಫಟ್ ಕೇಶ ವಿನ್ಯಾಸದ ಪ್ರಾತ್ಯಕ್ಷಿಕೆಯನ್ನೂ ಡೊಡೊ ನಡೆಸಿಕೊಟ್ಟರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry