ಕೇಶ ಶೃಂಗಾರಕ್ಕೆ ರಸ್ಕ್

7

ಕೇಶ ಶೃಂಗಾರಕ್ಕೆ ರಸ್ಕ್

Published:
Updated:
ಕೇಶ ಶೃಂಗಾರಕ್ಕೆ ರಸ್ಕ್

ಫ್ಯಾಷನ್ ರಂಗದಲ್ಲಿ ಪ್ರಖ್ಯಾತವಾಗಿರುವ ಹೆಡ್ ಸ್ಟಾರ್ಟ್ ಇಂಟರ್‌ನ್ಯಾಷನಲ್ ಭಾರತದಲ್ಲಿ ಪ್ರಥಮ ಬಾರಿಗೆ ರಸ್ಕ್ ಹೇರ್ ಕೇರ್ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಭಾರತೀಯರ ಕೇಶಕ್ಕೆ ಹೊಸ ನೋಟ ನೀಡುತ್ತದೆ.ಈ ಉತ್ಪನ್ನಗಳ ಬಗ್ಗೆ ಸಲೋನ್‌ಗಳ ಹೇರ್ ಸ್ಟೈಲಿಶ್‌ಗಳಿಗೆ ತಿಳಿಸಿಕೊಡಲು ಬೆಂಗಳೂರಿನಲ್ಲಿ ವಿಚಾರ ಸಂಕಿರಣ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಸ್ಟೈಲಿಸ್ಟ್‌ಗಳಿಂದ ಮೇಕ್ ಓವರ್‌ನ  ಪ್ರಾತ್ಯಕ್ಷಿಕೆ ಇತ್ತು.ರಸ್ಕ್‌ನ ಕ್ರಿಯೇಟಿವ್ ಹೆಡ್ ಶೆರ‌್ರಿ ಜೆಸ್ಸೆ ಮತ್ತು ಮಾರ್ಕಸ್ ಕೈಲೆಟ್ ಅವರು ರೂಪದರ್ಶಿಗಳ ತಲೆಗೂದಲಿನಲ್ಲಿ ತಮ್ಮ ಕೈಚಳಕ ಪ್ರದರ್ಶಿಸಿದರು. ಉದ್ದ ಕೂದಲಿನ ನೀಳವೇಣಿ, ಸ್ಟೆಪ್ ಕಟ್, ಯು ಕಟ್, ಲೇಯರ್ ಕಟ್...ಹೀಗೆ ಹತ್ತಾರು ಬಗೆಯ ಕಟ್‌ಗಳೊಂದಿಗೆ ಯುವಕರಿಗೂ ಹೇರ್ ಮಸಾಜ್ ಮತ್ತು ಕಟ್‌ಗಳನ್ನು ಮಾಡಿ ತೋರಿಸಿದರು.ಪ್ರತಿಯೊಬ್ಬರ ಕೂದಲು, ಟೆಕ್ಸ್‌ಚರ್,  ಮೈ ಬಣ್ಣ, ಉದ್ಯೋಗ, ಜೀವನ ಶೈಲಿ ಅವಲಂಬಿಸಿ ವಿವಿಧ ಹೇರ್ ಕೇರ್ ಸ್ಟೈಲ್‌ಗಳು, ಉತ್ಪನ್ನಗಳನ್ನು ಪರಿಚಯಿಸಲಾಗಿದೆ ಎಂದು ರಸ್ಕ್  ಪ್ರಾದೇಶಿಕ ಮುಖ್ಯಸ್ಥರಾದ (ಸೌತ್) ಹೆಡ್‌ವೈಜ್ ಸ್ಲಸ್ ತೂರ್ ಹೇಳಿದರು. ಕಂಡೀಷನರ್, ಶಾಪೂ, ಕಲರ್, ಫಿನಿಷಿಂಗ್ ಟ್ರೀಟ್‌ಮೆಂಟ್ ಉತ್ಪನ್ನಗಳು ಇದರಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry