ಭಾನುವಾರ, ಜೂನ್ 13, 2021
26 °C

ಕೇಸರೀಕರಣದವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ:  ಶಿಕ್ಷಣದಲ್ಲಿ ಕೇಸರೀಕರಣ ವಿರೋಧಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.ಸರ್ಕಾರ ಹಿಂದುತ್ವ ಮತ್ತು ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿ ಮಕ್ಕಳ ಮನಸ್ಸಿಗೆ ವಿಷಪ್ರಾಶನ ಮಾಡಲು ಹೊರಟಿದೆ. ಮುಖ್ಯವಾಗಿ ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುವ, ಶೋಷಣೆ ಮುಂದುವರಿಸುವ, ಸಮಾಜದಲ್ಲಿ ಅಸಮಾನತೆ, ಅಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ವಿಷಯಗಳನ್ನು ಸೇರಿಸಲಾಗಿದೆ.

 

ಪುರೋಹಿತಶಾಹಿ ವ್ಯವಸ್ಥೆಯನ್ನು ಮರುಸ್ಥಾಪಿಸಲು  ಹುನ್ನರ ನಡೆಯುತ್ತಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ  ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಆಕ್ರೋಶ ವ್ಯಕ್ತಪಡಿಸಿದರು.ಗೋಹತ್ಯೆ ನಿಷೇಧವನ್ನು ಪ್ರತಿಪಾದಿಸುವವರಿಗೆ ಗೋವಿನ ನಿಜವಾದ ಮೌಲ್ಯ ಗೊತ್ತಿದೆಯೇ? ಈ ರೀತಿ ಬೋಧಿಸುವವರು ಗೋವನ್ನು ಸಾಕುತ್ತಾರೆಯೇ? ಲಕ್ಷಾಂತರ ರೂಪಾಯಿ ಮೌಲ್ಯದ ಗೋವಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

 

ಅಂಥವರು ಗೋವಿನ ಮಹತ್ವ ಹೇಳುತ್ತಿದ್ದಾರೆ. ಬೆಳಿಗ್ಗೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿಗಳು ಮೌಢ್ಯ ಬೋಧಿಸುತ್ತಿದ್ದಾರೆ. ರೈತರಿಗೆ ನಿರಂತರ ಅನ್ಯಾಯವಾಗುತ್ತಲೇ ಇದೆ ಎಂದು ಮಠಾಧೀಶರು, ಜ್ಯೋತಿಷಿಗಳು, ರಾಜಕಾರಣಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ನಗರದ ಅಂಬೇಡ್ಕರ್ ವೃತ್ತದಲ್ಲಿ ಭಾಷಣ ಮಾಡಿದ ಅವರು, ವೇದಿಕೆ ಕಾರ್ಯಕರ್ತರ ಜತೆಗೆ ಮೆರವಣಿಗೆ ಮೂಲಕ ಸಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಚಂದ್ರಶೇಖರ ತೋರಣಘಟ್ಟ, ಅನೀಸ್ ಪಾಶಾ, ಸೈಯದ್ ಇಸ್ಮಾಯಿಲ್, ಸತೀಶ್ ಅರವಿಂದ್ ಇತರರು ಭಾಗವಹಿಸಿದ್ದರು.ಇಂದು `ರಕ್ತರಾತ್ರಿ~ ಪ್ರದರ್ಶನಹರಪನಹಳ್ಳಿ:  ತಾಲ್ಲೂಕಿನ ಕೆರೆಗುಡಿಹಳ್ಳಿ ಗ್ರಾಮದಲ್ಲಿ ಮಾರ್ಚ್ 25ರಂದು ಭಾನುವಾರ ರಾತ್ರಿ 10ಕ್ಕೆ ಖ್ಯಾತ ರಂಗಕರ್ಮಿ ಕಂದಗಲ್ಲು ಹನುಮಂತರಾವ್ ವಿರಚಿತ `ರಕ್ತರಾತ್ರಿ~ ಪೌರಾಣಿಕ ನಾಟಕದ ಪ್ರದರ್ಶನ ಆಯೋಜಿಸಲಾಗಿದೆ.ಸ್ಥಳೀಯ ಬಸವೇಶ್ವರ ನಾಟ್ಯಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆಯುವ ನಾಟಕದಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಖ್ಯಾತ ಕಲಾವಿದೆ ಮನ್ಸೂರು ಸುಭದ್ರಮ್ಮ `ದ್ರೌಪದಿ~ ಪಾತ್ರದಲ್ಲಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯರೂ ಆದ `ಸುಧಾ~ಪತ್ರಿಕೆಯ ಸುದ್ದಿಸಂಪಾದಕ ಗುಡಿಹಳ್ಳಿ ನಾಗರಾಜ `ಧರ್ಮರಾಯ~ ಪಾತ್ರದಲ್ಲಿ,  ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಕಲಾವಿದೆ ಇಳಕಲ್ಲು ಉಮಾರಾಣಿ `ಮಧಹಂಸಿ~ ಹಾಸ್ಯಪಾತ್ರದಲ್ಲಿ, ವೀಣಾ ಆಧೋನಿ `ಉತ್ತರೆ~ ಹಾಗೂ ಕಿರುತೆರೆ ಹಾಗೂ ರಂಗಭೂಮಿ ಕಲಾವಿದೆ ಸೋಗಿ ನಾಗರತ್ನಮ್ಮ `ಭಾನುಮತಿ~ ಪಾತ್ರದಲ್ಲಿ ಕಾಣಿಸಿಕೊಳ್ಳುವರು.

ಶಾಸಕ ಎಸ್.ವಿ. ರಾಮಚಂದ್ರ ನಾಟಕ ಉದ್ಘಾಟಿಸುವರು. ವಕೀಲ ಪ್ರಕಾಶ್ ಪಾಟೀಲ್ ಅಧ್ಯಕ್ಷತೆ ವಹಿಸುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.