ಶುಕ್ರವಾರ, ಮೇ 20, 2022
21 °C

ಕೇಸರೀಕರಣವೆಂಬ ವೈರಸ್ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರ ಶಿಕ್ಷಣವನ್ನು ಕೇಸರೀಕರಿಸಲೇಬೇಕು ಎನ್ನುವ ಜಿದ್ದಿಗೆ ಬಿದ್ದಂತಿದೆ. ಶಿಕ್ಷಣ ಸಚಿವರು ಒಮ್ಮೆ, `ಭಗವದ್ಗೀತೆ ಬೇಡವೆನ್ನುವವರು ರಾಜ್ಯ ಬಿಟ್ಟು ಹೋಗಲಿ~ ಎಂದು ಗುಡುಗಿದ್ದರು. ಮೊನ್ನೆ ಕೆ.ಎಸ್. ಈಶ್ವರಪ್ಪ `ಕೇಸರೀಕರಣ ಮುಂದುವರೆಯಲಿ~ ಎಂದು ಶಿಕ್ಷಣ ಸಚಿವರಿಗೇ ತಾಕೀತು ಮಾಡಿದರು.ಇದು ಸಂವಿಧಾನಬಾಹಿರ ಕೆಲಸ ಎಂದು ಎಚ್ಚರಿಸಿದವರಿಗೆ, `ಇದರಲ್ಲಿ ರಾಜಿ ಇಲ್ಲ; ಇದು ಆಗಲೇಬೇಕಾದ ತುರ್ತುಕೆಲಸ. ಈ ಮಾತನ್ನು ನಾನು ಹಿಂದಕ್ಕೆ ಪಡೆಯುವುದಿಲ್ಲ~ ಎಂದು ಸವಾಲೆಸೆದರು.ಇವರ ವಾದಕ್ಕೆ ಪುಷ್ಟಿ ಕೊಡುವಂತೆ ಮಮ್ತೋಜ್ ಅಲಿಖಾನ್‌ರವರು ವಾಚಕರವಾಣಿಗೆ ಪತ್ರ ಬರೆದು `ಇದರಲ್ಲಿ ತಪ್ಪೇನಿದೆ, ಇಂದಿನ ಪೀಳಿಗೆಗೆ ನಮ್ಮ ಧಾರ್ಮಿಕ ಪರಂಪರೆಗಳು, ಹಿಂದೂ ಧರ್ಮದ ತತ್ವ, ಆಚರಣೆಗಳು ಪರಿಚಯವಾಗಲಿ~ ಎಂದು ಬಿನ್ನವಿಸಿದರು. ಕೇಸರೀಕರಣಕ್ಕೆ ಪ್ರತಿರೋಧ ಒಡ್ಡಿದವರೆನ್ನೆಲ್ಲಾ ಜಾತ್ಯತೀತರೆಂದು ಬೈದು ಅವಮಾನಿಸುವ ಕೆಲಸವನ್ನು ಮಂತ್ರಿಗಳು ಎಡೆಬಿಡದೆ ಮಾಡುತ್ತಿರುವರು.ಧಾರ್ಮಿಕ ಚಿಂತನೆಗಳು, ಧರ್ಮರಕ್ಷಣೆ, ಸನಾತನ ಆಚರಣೆ-ಪರಂಪರೆಗಳ ಸಂರಕ್ಷಣೆಗೆ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಿರುವ ಈ ಸರ್ಕಾರ ಮತ್ತದರ ಮಂತ್ರಿಗಳಿಗೆ  ನೈತಿಕತೆಯೆಂಬುದು ಎಲ್ಲಕ್ಕಿಂತ ಮಿಗಿಲಾದ ಬಲುದೊಡ್ಡ ಮೌಲ್ಯ ಎಂಬುದು ಅರ್ಥವಾಗುತ್ತಿಲ್ಲ ಏಕೆ?ಪ್ರಜಾತಂತ್ರ ವ್ಯವಸ್ಥೆಯೆಂಬುದು ಅಸ್ಥಿರವಾಗುತ್ತಿರುವಾಗ ಮಕ್ಕಳಿಗೆ ಬೋಧಿಸಬೇಕಿರುವುದು ನೈತಿಕ ಪಾಠವನ್ನೆ ಹೊರತು ಕೇಸರೀ ಕಥೆಗಳನ್ನಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.