ಗುರುವಾರ , ಜೂನ್ 24, 2021
23 °C

ಕೈಕೊಟ್ಟ ಪ್ರಿಯಕರ: ಯುವತಿ ಪಾಲಕರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ಪ್ರೀತಿಸಿ, ವಿವಾಹ ವಾಗುವುದಾಗಿ ಭರವಸೆ ನೀಡಿದ್ದ ಪ್ರಿಯಕರ ಕೈಕೊಟ್ಟಿದ್ದಾನೆ ಎಂದು ಯುವತಿಯ ಪಾಲಕರು ಗ್ರಾಮಾಂತರ ಪೊಲೀಸ್ ಠಾಣೆ ಎದುರು ಬುಧವಾರ ಧರಣಿ ನಡೆಸಿದರು. ತಾಲ್ಲೂಕಿನ ಹೆಮ್ಮಿಗೆ ಕಾಲೋನಿಯ ದಲಿತ ಸಮಾಜಕ್ಕೆ ಸೇರಿದ ಸತೀಶ್, ಇಲ್ಲಿಯ ಯುವತಿಯೊಬ್ಬಳನ್ನು  ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಈಗ ಅವಳನ್ನ್ನು ವಿವಾಹವಾಗಲು ಹಿಂದೇಟು ಹಾಕಿದ್ದಾನೆ ಎಂದು ಯುವತಿಯ ಪಾಲಕರು ದೂರಿದ್ದಾರೆ.`ಕೆಲ ತಿಂಗಳ ಹಿಂದೆ ಸರ್ಕಾರಿ ಉದ್ಯೋಗದಲ್ಲಿದ್ದ ವರನೊಬ್ಬ ನಮ್ಮ ಮಗಳನ್ನು ವಿವಾಹವಾಗಲು ಗ್ರಾಮಕ್ಕೆ  ಬಂದಿದ್ದ. ಆ ಸಮಯದಲ್ಲಿ ಸತೀಶ್ ವಿವಾಹಕ್ಕೆ ಅಡ್ಡಿ ಪಡಿಸಿ ತಾನೇ ನಮ್ಮ ಮಗಳನ್ನು ವಿವಾಹವಾಗುವುದಾಗಿ ನಂಬಿಸಿದ್ದ. ಈಗ ಕೈ ಕೊಟ್ಟಿದ್ದಾನೆ~  ಎಂದು ಯುವತಿಯ ತಂದೆ ವೆಂಕಟಯ್ಯ ಆರೋಪಿಸಿದರು.ಸದ್ಯ ಪೊಲೀಸ್ ವಶದಲ್ಲಿರುವ ಸತೀಶ್,  `ತಾನು ಆಕೆಯನ್ನು ಪ್ರೀತಿಸಿಲ್ಲ. ಯಾವುದೇ ಸಂಬಂಧವನ್ನೂ ಹೊಂದಿಲ್ಲ. ಇದೆಲ್ಲ ಅವರ ಕುಟುಂಬದವರು ಹುಟ್ಟಿಸಿ ಕೊಂಡಿರುವ ವಿಷಯ. ತಾನು ಅವಳನ್ನು ವಿವಾಹವಾಗುವ ಬದಲಿಗೆ ಪ್ರಾಣ ಬಿಡುತ್ತೇನೆ~ ಎಂದು ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.ಇತ್ತ ಧರಣಿ ನಡೆಸುತ್ತಿರುವ ಕಟ್ಟೆಮಳಲವಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ದೇವರಾಜ್ ಮತ್ತು ಹರೀಶ್ ಮಾತನಾಡಿ  ಇಬ್ಬರ ವಿವಾಹ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾರೆ.`ಯುವಕ, ಯುವತಿ ಇಬ್ಬರೂ ಸಮ್ಮತಿಸಿದರೆ ವಿವಾಹ ಮಾಡಿಸಬಹುದು. ಆದರೆ, ಈ ಪ್ರಕರಣದಲ್ಲಿ ಸತೀಶ್ ವಿವಾಹವಾಗಲು ನಿರಾಕರಿಸುತ್ತಿದ್ದು, ಕಾನೂನಿನಲ್ಲಿ ಬಲವಂತವಾಗಿ ವಿವಾಹ ಮಾಡಿಸಲು ಅವಕಾಶವಿಲ್ಲ.ಹುಡುಗಿಯ ಮನೆಯವರು ಹುಡುಗನ ವಿರುದ್ಧ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಬಹುದು~ ಎಂದು ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ಉದಯರವಿ ತಿಳಿಸಿದ್ದಾರೆ.ಎರಡೂ ಕುಟುಂಬಗಳ ನಡುವೆ ಸಂಧಾನ ನಡೆಸಲು ಪೊಲೀಸ್ ಠಾಣೆಗೆ ದಲಿತ ಮುಖಂಡರಾದ ರಾಯನಹಳ್ಳಿ ಸ್ವಾಮಿ, ಮಹದೇವ್, ಬಸವಲಿಂಗಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ಗಣಪತಿ ಇತರರು ಯತ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.