ಮಂಗಳವಾರ, ಏಪ್ರಿಲ್ 13, 2021
30 °C

ಕೈಕೊಟ್ಟ ವಿದ್ಯುತ್; ನೀರಿಗೆ ಹರಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ತಾಲ್ಲೂಕಿನಲ್ಲಿ ಒಂದು ವಾರದಿಂದ ಉಂಟಾಗಿರುವ ವಿದ್ಯುತ್ ಸಮಸ್ಯೆಯಿಂದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹರಸಾಹಸ ಪಡುವಂತಾಗಿದೆ.ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ 1.30ರ ಸುಡುಬಿಸಿಲಿನಲ್ಲಿ ನಲ್ಲಿಯಲ್ಲಿ ಬರುವ ಕುಡಿಯುವ ನೀರು ಹಿಡಿದುಕೊಳ್ಳಲು ಅಪಾರ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಕೊಡಗಳನ್ನು ಸಾಲಿಗೆ ಇಟ್ಟಿರುವ ದೃಶ್ಯ ಸಾಮಾನ್ಯವಾಗಿದೆ.ಮಹಿಳೆಯರು ಸುಡುವ ಬಿಸಿಲೆನ್ನದೆ ನೀರು ಹಿಡಿಯಲು ಕಾಯಬೇಕು. ಒಂದೊಂದು ಬೀದಿ ನಲ್ಲಿಗಳ ಮುಂದೆ ಕನಿಷ್ಠವೆಂದರೂ 50ರಿಂದ 70 ಕೊಡಗಳನ್ನು  ಸಾಲಿನಲ್ಲಿ ಇಟ್ಟು ತಮ್ಮ ಸರದಿ ಬರುವುದನ್ನು ಮನೆಗಳ ಜಗಲಿಗಳ ನೆರಳಿರುವ ಜಾಗದಲ್ಲಿ ನಿಂತು ಕಾಯುತ್ತಾರೆ. ಇದಕ್ಕೆಲ್ಲಾ ಕಾರಣ ವಿದ್ಯುತ್ ಕಣ್ಣಾಮುಚ್ಚಾಲೆಯಾಟ.ವಾರದಿಂದ ವಿದ್ಯುತ್ ಯಾವಾಗ ಹೋಗುತ್ತದೆ; ಯಾವಾಗ ಬರುತ್ತದೆ ಎಂಬುದು ಗೊತ್ತಾಗುತ್ತಿಲ್ಲ. ಮಧ್ಯರಾತ್ರಿಯ ವೇಳೆಯಲ್ಲಿ ಸುಮಾರು ಮೂರರಿಂದ ನಾಲ್ಕು ಗಂಟೆ ವಿದ್ಯುತ್ ಸಂಪೂರ್ಣವಾಗಿ ಇರುವುದಿಲ್ಲ. ವಿದ್ಯುತ್ ಸಮಸ್ಯೆಯಿಂದಾಗಿ ‘ನೀರು ಬಿಟ್ಟಾಗ ಹಿಡಿದು ಕೊಂಡವರೇ ಪುಣ್ಯವಂತರು’ ಎನ್ನುವಂತಾಗಿದೆ.ರಾತ್ರಿ ಅಥವಾ ಸುಡುವ ಬಿಸಿಲಿನಲ್ಲಿಯಾದರೂ ಬಿಡಲಿ ಕುಡಿಯುವ ನೀರನ್ನು ಹಿಡಿದುಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಹಾಗೆಯೇ, ಮನೆಗಳಲ್ಲಿ ಸಂಜೆಯ ಹೊತ್ತು ವಿದ್ಯುತ್ ಹೋಗುವುದರಿಂದ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗಿದೆ. ಇನ್ನೊಂದು ವಾರದಲ್ಲಿ ಪರೀಕ್ಷೆಗಳು ಆರಂಭಗೊಳ್ಳುತ್ತಿವೆ. ಒಟ್ಟಾರೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದಾಗಿ ಎಲ್ಲರಿಗೂ ಸಮಸ್ಯೆಯಾಗಿದೆ ಎನ್ನುತ್ತಾರೆ ಅಜ್ಜಿಹಳ್ಳಿ ಗ್ರಾಮದ ಚಂದ್ರಪ್ಪ, ಶಕುಂತಲಮ್ಮ, ಸೋಮಣ್ಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.