ಭಾನುವಾರ, ಮೇ 16, 2021
22 °C

ಕೈಗಾದಿಂದ ಬೆಳಕು

ನಾಗೇಂದ್ರ ಖಾರ್ವಿ,ಕಾರವಾರ Updated:

ಅಕ್ಷರ ಗಾತ್ರ : | |

ಕೈಗಾದಿಂದ ಬೆಳಕು

ಕೈಗಾ ಪರಮಾಣು ವಿದ್ಯುತ್ ಸ್ಥಾವರ ರಾಜ್ಯದಲ್ಲೇ ಇದ್ದರೂ ವಿದ್ಯುತ್ ಉತ್ಪಾದನೆಯಲ್ಲಿ ಶೇಕಡ ಇಂತಿಷ್ಟು ಪ್ರಮಾಣದ ವಿದ್ಯುತ್ ನಮಗೇ ನೀಡಬೇಕು ಅಥವಾ ದರದಲ್ಲಿ ರಿಯಾಯಿತಿ ನೀಡಬೇಕು ಎನ್ನುವ ಬೇಡಿಕೆಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಂದೆ ಇಡದೇ ಇದ್ದುದರಿಂದ ಪ್ರತಿ ಯೂನಿಟ್‌ಗೆ ಮೂರು ರೂಪಾಯಿ ಪಾವತಿ ಮಾಡುತ್ತಿದೆ. ಒಟ್ಟೂ ಉತ್ಪಾದನೆಯ ಪೈಕಿ ಶೇ 29ರಷ್ಟು ವಿದ್ಯುತ್ ಮಾತ್ರ ರಾಜ್ಯಕ್ಕೆ ಲಭ್ಯವಾಗುತ್ತಿದೆ.ಅಣುಶಕ್ತಿ ಇಲಾಖೆಯು ಇತ್ತೀಚೆಗೆ ಕಾನೂನಿಗೆ ಕೆಲವೊಂದು ತಿದ್ದುಪಡಿಗಳನ್ನು ಮಾಡಿದೆ. ಈ ತಿದ್ದುಪಡಿಯಂತೆ ಯಾವ ರಾಜ್ಯ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ  ಆಸಕ್ತಿ ತೋರುತ್ತದೆಯೋ ಆ ರಾಜ್ಯಕ್ಕೆ ಉತ್ಪಾದನೆಯ ಶೇ 50ರಷ್ಟು ವಿದ್ಯುತ್ ಪೂರೈಸಬೇಕು.ಕೈಗಾದಲ್ಲಿ ಇನ್ನೂ ಎರಡು ಪರಮಾಣು ವಿದ್ಯುತ್ ಘಟಕ ಸ್ಥಾಪಿಸುವ ಯೋಜನೆಯನ್ನು ಭಾರತೀಯ ಅಣುಶಕ್ತಿ ನಿಗಮವು ಹೊಂದಿದೆ. ಈ ಕುರಿತ ಯೋಜನಾ ವರದಿ ಕೇಂದ್ರ ಸರ್ಕಾರ ಮುಂದಿದೆ. ಈ ಎರಡೂ ಘಟಕಗಳು ತಲಾ 700 ಮೆಗಾ ವಾಟ್ ಸಾಮರ್ಥ್ಯದ್ದಾಗಿವೆ.ಈ ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಿದರೆ ಕೈಗಾದಲ್ಲಿ 1400 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಈ ಉತ್ಪಾದನೆಯ ಶೇ 50ರಷ್ಟು ವಿದ್ಯುತ್ ರಾಜ್ಯಕ್ಕೆ ಸಿಗಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.