ಕೈಗಾರಿಕಾ ಉತ್ಪಾದನೆ ವೃದ್ಧಿ ಕುಂಠಿತ

7

ಕೈಗಾರಿಕಾ ಉತ್ಪಾದನೆ ವೃದ್ಧಿ ಕುಂಠಿತ

Published:
Updated:
ಕೈಗಾರಿಕಾ ಉತ್ಪಾದನೆ ವೃದ್ಧಿ ಕುಂಠಿತ

ನವದೆಹಲಿ (ಪಿಟಿಐ): ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ವೃದ್ಧಿಯು ಶೇ 3.6ಕ್ಕೆ ಕುಂಠಿತಗೊಂಡಿದೆ.ತಯಾರಿಕೆ ಮತ್ತು ಗಣಿಗಾರಿಕೆ ರಂಗದ ಕಳಪೆ ಸಾಧನೆಯಿಂದಾಗಿ ಈ ಕುಂಠಿತ ಬೆಳವಣಿಗೆ ದಾಖಲಾಗಿದ್ದರೂ, ಒಟ್ಟು 17 ಕೈಗಾರಿಕಾ ವಲಯಗಳ ಪೈಕಿ 15 ವಲಯಗಳು ಸಕಾರಾತ್ಮಕ ಬೆಳವಣಿಗೆ ಸಾಧಿಸಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕೈಗಾರಿಕಾ ಉತ್ಪಾದನೆ ಬೆಳವಣಿಗೆ ದರವು ಶೇ 15ರಷ್ಟಿತ್ತು.

 

ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಆಧರಿಸಿ ಅಳೆಯುವ ಕಾರ್ಖಾನೆಗಳ ಉತ್ಪಾದನೆಯು, ಫೆಬ್ರುವರಿಯಲ್ಲಿ ಹಿಂದಿನ ತಿಂಗಳ ಪರಿಷ್ಕೃತ ಅಂಕಿಸಂಖ್ಯೆಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದೆ.ಈ ತಿಂಗಳಲ್ಲಿ ತಯಾರಿಕಾ ರಂಗದ ಬೆಳವಣಿಗೆಯು ಹಿಂದಿನ ವರ್ಷದ ಶೇ 16ಕ್ಕೆ ಹೋಲಿಸಿದರೆ ಕೇವಲ ಶೇ 3.5ರಷ್ಟು ಏರಿಕೆ ದಾಖಲಿಸಿದೆ. ಭಾರಿ ಯಂತ್ರೋಪಕರಣಗಳ ತಯಾರಿಕೆಯು ಶೇ 18.4ರಷ್ಟು ಕುಸಿತ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ರಂಗವು ದಾಖಲೆ ಎನ್ನಬಹುದಾದ ಶೇ 46.7ರಷ್ಟು ವೃದ್ಧಿ ಕಂಡಿತ್ತು.

 

 ಗ್ರಾಹಕ ಬಳಕೆಯ ಬಾಳಿಕೆಗೆ ಬಾರದ ವಲಯದ ಉತ್ಪಾದನೆಯು ಶೇ 6ರಷ್ಟು ಮತ್ತು ಬಾಳಿಕೆಗೆ ಬರುವ ಸರಕುಗಳ ಉತ್ಪಾದನೆಯು ಶೇ 23ರಷ್ಟು ಹೆಚ್ಚಳ ಕಂಡಿದೆ. ಒಟ್ಟಾರೆ ಗ್ರಾಹಕ ಉತ್ಪನ್ನಗಳ ತಯಾರಿಕೆಯು ಶೇ 11ರಷ್ಟು ಹೆಚ್ಚಳಗೊಂಡಿದೆ.ಗಣಿಗಾರಿಕೆಯು ವರ್ಷದ ಹಿಂದೆ ಶೇ 11ರಷ್ಟು ಹೆಚ್ಚಳಗೊಂಡಿದ್ದರೆ ಈ ಬಾರಿ ಶೇ 0.6ರಷ್ಟಕ್ಕೆ ಕುಸಿತ ಕಂಡಿದೆ. ವಿದ್ಯುತ್ ಉತ್ಪಾದನೆಯು ಶೇ 6.7ರಷ್ಟು ಏರಿಕೆ ದಾಖಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry