ಕೈಗಾರಿಕಾ ಪ್ರಗತಿ ಚೇತರಿಕೆ

7

ಕೈಗಾರಿಕಾ ಪ್ರಗತಿ ಚೇತರಿಕೆ

Published:
Updated:
ಕೈಗಾರಿಕಾ ಪ್ರಗತಿ ಚೇತರಿಕೆ

ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರ ಸರಣಿ ಆರ್ಥಿಕ ಸುಧಾರಣಾ ಕ್ರಮಗಳನ್ನು ಪ್ರಕಟಿಸಿರುವ ಬೆನ್ನಲ್ಲೇ, ಆಗಸ್ಟ್‌ನಲ್ಲಿನ ಕೈಗಾರಿಕಾ ಪ್ರಗತಿ ಸೂಚ್ಯಂಕ(ಐಐಪಿ) ಬಿಡುಗಡೆ ಗೊಂಡಿದ್ದು, ಶೇ 2.7ರಷ್ಟು ಪ್ರಗತಿ ದಾಖಲಿಸಿದೆ. `ಐಐಪಿ~ ಚೇತರಿಸಿಕೊಂಡಿರುವುದು ಉದ್ಯಮ ವಲಯದಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, `ಆರ್‌ಬಿಐ~ ಅಲ್ಪಾವಧಿ ಬಡ್ಡಿ ದರ ತಗ್ಗಿಸಬಹುದು ಎನ್ನುವ ಆಶಾಭಾವನೆ ಮೂಡಿದೆ.2011ರ ಆಗಸ್ಟ್‌ನಲ್ಲಿ ಶೇ 3.4ರಷ್ಟು `ಐಐಪಿ~ ದಾಖಲಾಗಿತ್ತು. ಆದರೆ, ಆರ್ಥಿಕ ಅಸ್ಥಿರತೆ ಮತ್ತು ಬಡ್ಡಿ ದರ ಹೆಚ್ಚಳದಿಂದ ಜುಲೈನಲ್ಲಿ `ಐಐಪಿ~ ಋಣಾತ್ಮಕ ಮಟ್ಟ ಶೇ -0.18ಕ್ಕೆ ಕುಸಿದಿತ್ತು. ಶುಕ್ರವಾರ ಬಿಡುಗಡೆಗೊಂಡ ಅಂಕಿ-ಅಂಶ ಪ್ರಕಾರ ಏಪ್ರಿಲ್-ಆಗಸ್ಟ್‌ನಲ್ಲಿ ಶೇ 0.4ರಷ್ಟು ಕೈಗಾರಿಕಾ ಪ್ರಗತಿ ಕಂಡಿದೆ. ಒಟ್ಟಾರೆ `ಐಐಪಿ~ಗೆ ಗರಿಷ್ಠ ಕೊಡುಗೆ  ನೀಡುವ ತಯಾರಿಕಾ ವಲಯ ಆಗಸ್ಟ್‌ನಲ್ಲಿ ಶೇ 3.9ರಷ್ಟು ಚೇತರಿಕೆ ಕಂಡಿದೆ.`ಆಗಸ್ಟ್ ತಿಂಗಳ `ಐಐಪಿ~ ಅಂಕಿ-ಅಂಶ ಗಮನಿಸಿದರೆ ಮುಂಬರುವ ತಿಂಗಳಲ್ಲಿ ತಯಾರಿಕಾ ವಲಯ ಶೇ 3ರಿಂದ ಶೇ 4ರಷ್ಟು ಚೇತರಿಸಿಕೊಳ್ಳುವ ಸೂಚನೆ ಕಂಡುಬರುತ್ತದೆ~ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಅಧ್ಯಕ್ಷ ಸಿ.ರಂಗರಾಜನ್ ಪ್ರತಿಕ್ರಿಯಿಸಿದ್ದಾರೆ.`ಆರ್ಥಿಕ ಸುಧಾರಣೆಗಳ ಜತೆಗೆ, ಸರ್ಕಾರ ಭೂಸ್ವಾಧೀನ ಸಮಸ್ಯೆ ಬಗೆಹರಿಸಬೇಕು. ಮೂಲಸೌಕರ್ಯ ಯೋಜನೆಗಳ ವಿಳಂಬ ತಪ್ಪಿಸಬೇಕು~ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry