ಕೈಗಾರಿಕಾ ಪ್ರಗತಿ ಶೇ 4.4

ನವದೆಹಲಿ(ಪಿಟಿಐ): ದೇಶದ ಎಂಟು ಪ್ರಮುಖ ಕೈಗಾರಿಕಾ ವಲಯಗಳು ಕಳೆದ ಆರು ತಿಂಗಳಲ್ಲಿಯೇ ಗರಿಷ್ಠ ಮಟ್ಟದ ಸಾಧನೆ ತೋರಿವೆ. ಮೇ ತಿಂಗಳಲ್ಲಿ ಶೇ 4.4ರಷ್ಟು ಉತ್ತಮ ಸಾಧನೆ ದಾಖಲಾಗಿದೆ. 2014ರ ಮೇ ತಿಂಗಳಲ್ಲಿ ಶೇ 3.8ರಷ್ಟು ಪ್ರಗತಿ ಕಂಡುಬಂದಿತ್ತು.
ಕಲ್ಲಿದ್ದಲು (ಶೇ 7.8), ಶುದ್ಧೀಕರಿಸಿದ ಉತ್ಪನ್ನಗಳು (ಶೇ 7.9) ಮತ್ತು ವಿದ್ಯುತ್ ಉತ್ಪಾದನೆ (ಶೇ 5.5) ವಲಯದಿಂದ ಅತ್ಯುತ್ತಮ ಕೊಡುಗೆ ಬಂದಿದ್ದರಿಂದ ಮೇ ತಿಂಗಳಲ್ಲಿನ ಈ ಎಂಟೂ ಪ್ರಮುಖ ಕೈಗಾರಿಕೆಗಳ ವಿಭಾಗದ ಸಾಧನೆ ಮೇಲ್ಮಟ್ಟದ್ದಾಗಿದೆ.
ಮೂಲ ಸೌಕರ್ಯ ವಲಯಕ್ಕೆ ಸೇರಿದ ಈ ಎಂಟು ಪ್ರಮುಖ ಕೈಗಾರಿಕಾ ವಿಭಾಗಗಳಿಂದಲೇ ದೇಶದ ಒಟ್ಟಾರೆ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕಕ್ಕೆ (ಐಐಪಿ) ಶೇ 38ರಷ್ಟು ಕೊಡುಗೆ ಬರುತ್ತದೆ.
ಇದೇ ವೇಳೆ, ಕಚ್ಚಾತೈಲ(ಶೇ 0.8), ಉಕ್ಕು ಮತ್ತು ಸಿಮೆಂಟ್ ವಲಯದಿಂದ (ಶೇ 2.64), ರಸಗೊಬ್ಬರ ವಿಭಾಗದಿಂದ (ಶೇ 1.3) ಸಮಾಧಾನಕರ ಸಾಧನೆ ಯಾಗಿದೆ. ಆದರೆ, ನೈಸರ್ಗಿಕ ಅನಿಲ ಉತ್ಪಾದನೆ ವಲಯ ಮಾತ್ರವೇ ಹಿನ್ನಡೆ ಕಂಡಿದೆ. ಮೇ ತಿಂಗಳಲ್ಲಿ ನೈಸರ್ಗಿಕ ಅನಿಲ ಉತ್ಪಾದನೆ ವಿಭಾಗ ಶೇ (ಮೈನಸ್) -3.1ರಷ್ಟು ಹಿನ್ನಡೆ ಅನುಭವಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.